ತುಮಕೂರು: 2021ರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (UPSC) 308ನೇ ಸ್ಥಾನ ಪಡೆದಿರುವ ಅರುಣಾ ಮಹಾಲಿಂಗಪ್ಪ, ರೈತರ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ.
ಅರುಣಾ ಅವರು ಸಿದ್ದಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿಯ ಎರಡನೇ ಸೆಮಿಸ್ಟರ್‌ನಲ್ಲಿದ್ದಾಗ ಸಾಲದ ಸುಳಿಗೆ ಸಿಲುಕಿ ಅವರ ತಂದೆ ಮಹಾಲಿಂಗಪ್ಪ ಆತ್ಮಹತ್ಯೆಗೆ ಶರಣಾದರು. ನಂತರ ಅರುಣಾ ಅವರು UPSC ಅನ್ನು ಸವಾಲಾಗಿ ತೆಗೆದುಕೊಂಡರು. ಪರೀಕ್ಷೆ ಬರೆದು ಪಾಸ್ ಆಗಿ ಸಾಧನೆ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಅರುಣಾ, 'ನಾನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಣ್ಣ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇನೆ. ನಮ್ಮ ಅಪ್ಪ ಮಹಾಲಿಂಗಪ್ಪ, ತಾಯಿ ವಿಮಲಾಕ್ಷಿ. ನಾವು 5 ಜನ ಮಕ್ಕಳು. ನನ್ನ ತಂದೆ ತಂದೆ ಬಡ ರೈತರಾಗಿದ್ದರೂ ನಮಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಾಲ ಮಾಡಿದ್ದರು. ಆದರೆ ಸಾಲದ ಶೂಲಕ್ಕೆ ಸಿಲುಕಿ 2009ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಆದರೆ ನನ್ನ ತಂದೆಯ ಸಾವನ್ನು ನಾನು ಸವಾಲಾಗಿ ಸ್ವೀಕರಿಸಿ ರೈತರಿಗೆ ಸೇವೆ ಮಾಡಬೇಕೆಂದು ಯುಪಿಎಸ್‍ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡಿದೆ' ಎಂದು ಹೇಳಿಕೊಂಡಿದ್ದಾರೆ.
ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸಹ ಅವರು ತಮ್ಮ ಎಲ್ಲ 5 ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸವನ್ನು ಕೊಟ್ಟಿದ್ದಾರೆ. ಅವರು ನಮ್ಮನ್ನು ಅರ್ಧದಲ್ಲಿ ಕೈಬಿಟ್ಟು ಹೋಗಿಲ್ಲ. ಅವರ ಪರಿಶ್ರಮದಿಂದ ನಾನು, ನನ್ನ ತಮ್ಮ ಮತ್ತು ನನ್ನ 2ನೇ ಅಕ್ಕ ಇಂಜಿನಿಯರ್ ಮತ್ತು ನನ್ನ ತಂಗಿ ಎಂಬಿಬಿಎಸ್ ಓದಿದ್ದಳು. ಎಲ್ಲರಿಗೂ ಫೀಸ್ ಕಟ್ಟುವುದಕ್ಕೆ ಅವರು ಸಾಲ ಮಾಡಬೇಕಾಯಿತು. ನಾವು ಎಲ್ಲರೂ ಓದಿ ಉತ್ತಮ ಸ್ಥಿತಿಗೆ ಬರುವ ಸಮಯದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಅರುಣಾ ನೋವು ತೋಡಿಕೊಂಡಿದ್ದಾರೆ.
ನಾನು ಪ್ರತಿಸಲ ನಾನು ಪ್ರಿಲಿಮ್ಸ್ ಪಾಸ್ ಆಗುತ್ತಿದೆ. 6 ಮೇನ್ಸ್ ಕೊಟ್ಟೆ. 3 ಮೇನ್ಸ್ ಸಮಯದಲ್ಲಿ ನನಗೆ ಆರೋಗ್ಯದಲ್ಲಿ ತೊಂದರೆ ಕಾಣಿಸಿತು. 5 ಸಲ ಫೇಲ್ ಆಯ್ತು. 6ನೇ ಪರೀಕ್ಷೆಯ ವೇಳೆ ಕೊರೊನಾ ಬಂದಿತ್ತು. ನಾನು ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದಲೇ ಪರೀಕ್ಷೆಗೆ ಹೋಗುವಂತೆ ಆಯ್ತು. ಈ ಬಾರಿಯೂ ಪರೀಕ್ಷೆಯಲ್ಲಿ ಪಾಸ್ ಆಗುತ್ತೇನೆ ಎಂದು ತಿಳಿದಿರಲಿಲ್ಲ. ಅದಕ್ಕೆ ನಾನು ಅಕಾಡೆಮಿಯನ್ನು ತೆರೆದಿದ್ದೆ. ಇಲ್ಲಿ ನಾನು ಕನ್ನಡದಲ್ಲಿ ಬರೆಯುವ ಮತ್ತು ಹಳ್ಳಿಯಿಂದ ಬರುತ್ತಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡುತ್ತಿದ್ದೆ. ಅವರನ್ನು ಐಎಎಸ್ ಮಾಡಿ ನನ್ನ ಕನಸನ್ನು ಅವರ ಮೂಲಕ ನನಸು ಮಾಡಿಕೊಳ್ಳಬೇಕು ಎಂದು ತಿಳಿದುಕೊಂಡಿದ್ದೆ ಎಂದು ಅರುಣಾ ತಿಳಿಸಿದ್ದಾರೆ.
PublicNext
31/05/2022 10:53 pm