ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೈಲಿನಲ್ಲಿದ್ದೇ ಓದಿ IIT JAM 2022 ಪರೀಕ್ಷೆಯಲ್ಲಿ ಸೂರಜ್ ಕುಮಾರ್ 54ನೇ ರ‍್ಯಾಂಕ್

ಕೊಲೆ ಪ್ರಕರಣವೊಂದರಲ್ಲಿ ಬಿಹಾರದ ನವಡ ಜೈಲ್ ನಲ್ಲಿದ್ದ ಸೂರಜ್ ಕುಮಾರ್ ಎಂಬ ಯುವಕ ರೂರ್ಕಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಡೆಸಿದ್ದ ಜಾಯಿಂಟ್ ಅಡ್ಮಿಷನ್ ಟೆಸ್ಟ್ ಪಾರ್ ಮಾಸ್ಟರ್ಸ್ (JAM-2022) ಪರೀಕ್ಷೆಯಲ್ಲಿ ಅಖಿಲ ಭಾರತದ 54ನೇ ರ‍್ಯಾಂಕ್ ಪಡೆದಿದ್ದಾರೆ.

ಫೆ.13 ರಂದು ನಡೆದ ಐಐಟಿ ರೂರ್ಕಿ'ಯು IIT-JAM 2022 ಪರೀಕ್ಷೆಯನ್ನು ಫೆಬ್ರುವರಿ 13 ರಂದು ನಡೆಸಿತ್ತು. ಈ ಪರೀಕ್ಷೆಯಲ್ಲಿ ಸೂರಜ್ ಉತ್ತಿರ್ಣರಾಗಿದ್ದರೆ. ಕಳೆದ ಒಂದು ವರ್ಷದದಿಂದ ಜೈಲಿನಲ್ಲಿ ಬಂಧಿಯಾಗಿರುವ ಸೂರಜ್ ಭವಿಷ್ಯದ ಭರವಸೆ ಕಳೆದುಕೊಳ್ಳದೆ ಸಾಧನೆ ಮಾಡಿ ಶಹಬಾಶ್ ಎನಿಸಿಕೊಂಡಿದ್ದಾರೆ.

ಕಾರಾಗೃಹದ ಅಧಿಕಾರಗಳು ಮತ್ತು ಶಿಕ್ಷಣ ಪಡೆದ ಕೈದಿಗಳ ಸಹಾಯದಿಂದ ಜೈಲಿನಲ್ಲಿದೇ ಪರೀಕ್ಷೆಗೆ ಉತ್ತಮ ಸಿದ್ಧತೆ ನಡೆಸಿ, ಜಾಮ್ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆದಿದ್ದಾನೆ.

Edited By : Nirmala Aralikatti
PublicNext

PublicNext

25/03/2022 09:04 pm

Cinque Terre

43.8 K

Cinque Terre

4

ಸಂಬಂಧಿತ ಸುದ್ದಿ