ವರದಿ : ನಿರ್ಮಲಾ ಅರಳಿಕಟ್ಟಿ
ತಂದೆ– ಮಗಳ ನಡುವಿನ ಬಾಂಧವ್ಯ ಗಟ್ಟಿಯಾದರೆ, ಅದು ಮಗಳ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕಿದಂತೆ.
ಪ್ರಸ್ತುತ ಸಮಾಜದಲ್ಲಿ ಹೆಣ್ಣು ಮಗು ಜನನವಾಯಿತ್ತೆಂದರೆ ಸಾಕು ಹುಣ್ಣು ಹುಟ್ಟಿದಂತೆ ಚಿಂತೆ ಮಾಡುವವರೇ ಹೆಚ್ಚು…
ಹಾಗಾಗಿ ಅದೇಷ್ಟೋ ಪಾಪಿಗಳು ಭ್ರೂಣ ಹತ್ಯೆ ಮಾಡಲು ಮುಂದಾಗಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಮುಂದೆ ಇವೆ.
ಆದರೆ ಇದೆಲ್ಲದರ ಮಧ್ಯೆಯೂ ಹೆಣ್ಣು ಮಗಳನ್ನು ತುಸು ಹೆಚ್ಚಾಗಿಯೇ ಪ್ರೀತಿಸುವ ತಂದೆ ತಾಯಿಗಳು ಇದ್ದಾರೆ.
ತಂದೆಯಂದಿರು ಮಗಳನ್ನು ತುಸು ಹೆಚ್ಚಾಗಿಯೇ ಅಕ್ಕರೆಯಿಂದ ಸಾಕಿರುತ್ತಾರೆ.. ಅದೇಕೊ ಗೊತ್ತಿಲ್ಲ ಗಂಡು ಮಕ್ಕಳ ಮೇಲೆ ಅಪ್ಪಂದಿರಿಗೆ ಪ್ರೀತಿ ಕಡಿಮೆ ಎಂದಲ್ಲ ಬದಲಿಗೆ ಮಗಳ ಮೇಲಿನ ಪ್ರೀತಿಯ ತೂಕ ತುಸು ಜಾಸ್ತಿಯೇ.. ಅಲ್ವಾ ಅಪ್ಪಂದಿರೇ?
ಹೆಣ್ಣು ಮಗು ಹುಟ್ಟಿದ ಕೂಡಲೇ ಅದರ ಜೊತೆ ಅಪ್ಪನ ಸುಮಧುರ ಬಾಂಧವ್ಯವೂ ಶುರುವಾಗುತ್ತದೆ.
ತನ್ನ ಮುದ್ದು ಮಗಳ ಮಾನಸಿಕ ಬೆಳವಣಿಗೆಯ ಮೇಲೆ ಆತನ ಅಪಾರ ಪ್ರಭಾವ ಶುರುವಾಗುವುದು ಅಲ್ಲಿಂದಲೇ.
ಅಪ್ಪ ನನ್ನ ಜೊತೆಗಿದ್ದಾನೆ ಎನ್ನುವ ಅಚಲ ನಂಬಿಕೆ, ಆತ್ಮವಿಶ್ವಾಸದಲ್ಲಿಯೇ, ಬದುಕಿನಲ್ಲಿ ಏನು ಸಾಧಿಸಬೇಕು ಎಂಬುದರ ಕುರಿತೂ ಗಟ್ಟಿಯಾದ ನಿಲುವು ತಾಳುತ್ತಾಳೆ ಮಗಳು.
ಹೀಗೆ ಅಪ್ಪನೊಂದಿಗಿನ ಅವಿನಾಭಾವ ಸಂದಬಂದದಿಂದಲೇ ಮಗಳು ತಂದೆಯನ್ನೇ ತನ್ನ ಮಗುವಂತೆ ಸಾಕುತ್ತಾಳೆ.
ಇದಕ್ಕೆ ಈ ವಿಡಿಯೋನೆ ಸಾಕ್ಷಿ…
ಒತ್ತಡ ಬದುಕಿನಲ್ಲಿ ಸಂಸಾರದ ಹೊಗ ಹೊತ್ತ ತಂದೆ ಎಲ್ಲವನ್ನೂ ಸಂಬಾಳಿಸಲು ನಿತ್ಯ ಹೆಣಗಾಡುತ್ತಾನೆ. ಅಪ್ಪನೆಂಬ ಆಕಾಶದಲ್ಲಿ ಕುಟುಂಬದ ಸದಸ್ಯರೆಲ್ಲ ನಕ್ಷತ್ರದಂದೆ ಅವನನ್ನೇ ಅವಲಂಭಿತರಾಗಿರುತ್ತಾರೆ.
ಹೀಗೆ ಸಂಸಾರದ ನೌಕೆಯನ್ನು ಸರಾಗವಾಗಿ ಸಾಗಿಸು ಅಪ್ಪ ಕೆಲವೊಂಮ್ಮೆ ತನ್ನನ್ನೇ ತಾನು ಮರೆತಿರುತ್ತಾನೆ.
ಅಪ್ಪ ಹಚ್ಚಿದ ಹಣತೆ ಮನೆಯನ್ನಾ ಸದಾ ಬೆಳಗುತ್ತಿರುತ್ತದೆ ಮನೆಮಂದಿಯ ಮನಕೆ ಮಬ್ಬು ಕವಿಯದಂತೆ ಅಪ್ಪ ಹವನಿಸುವಾಗ ಅಪ್ಪನಿಗೆ ಅಮ್ಮನಾಗುವಳು ಮಗಳು…
PublicNext
20/09/2020 05:22 pm