ನವದೆಹಲಿ: ಒಬ್ಬ ವ್ಯಕ್ತಿಯು ಏನನ್ನಾದರೂ ಮಾಡಲು ನಿರ್ಧರಿಸಿದರೆ ವಯಸ್ಸು ಅಥವಾ ತೊಂದರೆಗಳು ಲೆಕ್ಕವೇ ಅಲ್ಲ ಎಂಬ ಮಾತಿದೆ. ಅಂತಹ ಒಂದು ವಿಚಿತ್ರ ಪ್ರಕರಣ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊರಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ 65 ವರ್ಷದ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವೈದ್ಯರ ಪ್ರಕಾರ, ತಾಯಿ ಮತ್ತು ಮಗಳು ಆರೋಗ್ಯವಾಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ ಅವರು ಜಮ್ಮು ಮತ್ತು ಕಾಶ್ಮೀರದ ಹಿರಿಯ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶೇಷವೆಂದರೆ ಮಹಿಳೆಗೆ 10 ವರ್ಷದ ಮಗನಿದ್ದಾನೆ.
ಮಹಿಳೆಯ ಗಂಡನ ಹೆಸರು ಹಕೀಮ್ ದಿನ್. ಅವರಿಗೆ 80 ವರ್ಷ. ತಾನು ಪೂಂಚ್‌ನ ಕೇಶೈಲಾ ಸುರನ್‌ಕೋಟ್‌ನಲ್ಲಿ ವಾಸಿಸುತ್ತಿದ್ದೇನೆ ಎಂದು ಹಕೀಮ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದೆ, ಅಲ್ಲಿ ಆಕೆ ಸೋಮವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹತ್ತು ವರ್ಷಗಳ ಹಿಂದೆ ನಮಗೆ ಒಬ್ಬ ಮಗ ಹುಟ್ಟಿದ್ದಾನೆ ಎಂದು ಹಕೀಮ್ ತಿಳಿಸಿದ್ದಾರೆ.
PublicNext
23/12/2020 08:37 pm