ಮಂಗಳೂರು : ಹಿರಿಯ ಪತ್ರಕರ್ತ 58 ವರ್ಷದ ವೈ. ರವಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಪರಿಣಾಮ ಮಂಗಳೂರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕಾಸರಗೋಡು ಮೂಲದ ರವಿ ಶಿವಮೊಗ್ಗ, ಮಂಡ್ಯ, ಗದಗ ಜಿಲ್ಲಾ ವರದಿಗಾರ, ಮಂಗಳೂರು ಬ್ಯುರೊ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಇವರು ಜಮ್ಮು ಕಾಶ್ಮೀರದ ಶ್ರೀನಗರ ಹಾಗೂ ಕಲಬುರಗಿಯಲ್ಲಿ ಸಹ ಕರ್ತವ್ಯ ನಿರ್ವಹಿಸಿದ್ದರು.
ಪತ್ರಕರ್ತ ರವಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶೋಕ ಸಂದೇಶ ನೀಡಿದ್ದಾರೆ.
"ಮೃದು ಮಾತಿನ, ಸ್ನೇಹ ಜೀವಿಯಾಗಿದ್ದ ವೈ.ರವಿ ಅವರು ಪ್ರಜಾವಾಣಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ವರದಿಗಾರರಾಗಿ, ಬ್ಯೂರೋ ಮುಖ್ಯಸ್ಥರಾಗಿ ಸಲ್ಲಿಸಿದ ಸೇವೆ ಅನನ್ಯ.
ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ" ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
PublicNext
15/12/2020 11:59 am