ತಂಜಾವೂರು: ಸಾಮಾನ್ಯವಾಗಿ ವ್ಯಕ್ತಿಯೊಬ್ಬ ತೆಂಗಿನಕಾಯಿ ಕೀಳಲು ಬರೋಬ್ಬರಿ 55 ಅಡಿ ಎತ್ತರದ ತೆಂಗಿನ ಮರ ಹತ್ತಿದ್ದಾನೆ.
ಆದ್ರೆ ಮರವೇರಿದ ಭೂಪ ಕಾಯಿ ಕಿಳುವ ಬದಲು ಮರದಲ್ಲಿಯೇ ನಿದ್ರೆಗೆ ಜಾರಿ ಎಲ್ಲರಿಗೂ ಚಮಕ್ಕ ಕೊಟ್ಟಿದ್ದಾನೆ.
ಕರಂತೇಯ ಸರುಕ್ಕೆಯ ವೇಲೂರಿನ ತೆಂಗಿನ ಕಾಯಿ ಕೀಳುವ ಎಕ್ಸ್ಪರ್ಟ್ ಎಂ. ಲೋಕನಾಥನ್ ಮರವೇರಿ ಎಲ್ಲರನ್ನೂ ದಿಗಿಲು ಬಡಿಸಿದ್ದ ಮಾಹಾಶೂರ.
ಇತ ಸರಸರನೇ ಮರವೇರಿದ್ದಾನೆ ಬಳಿಕ ಗಫ್ ಚುಫ್ ಆಗಿದ್ದಾನೆ ಈ ವೇಳೆ ಕೆಳಗೆ ನೀತವರು ಎಷ್ಟು ಹೊತ್ತಾದರೂ ಕಾಯಿ ಮಾತ್ರ ಕೆಳಕ್ಕೆ ಬೀಳಲೇ ಇಲ್ಲಎಂದು ಭಯ ಬೀತರಾಗಿದ್ದಾರೆ.
ಗಂಟೆಯಾದರೂ ಅವನ ಪತ್ತೆಯೇ ಇಲ್ಲವಗುದ್ದಂತೆ ಗಾಬರಿಯಾದ ಜನ ಅಷ್ಟು ಎತ್ತರದ ಮರವೇರಿ ಹೋಗಿ ನೋಡುವವರಾದರೂ ಯಾರು?
ಎಂದು ತೋಚದೆ ತಾಂಜಾವೂರಿನ ಪಶ್ಚಿಮ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಅಗ್ನಿ ಶಾಮಕದಳದ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಮರವನ್ನೇರಿ ಸ್ವಾಮಿನಾಥನ್ ನ ಬದುಕಿದ್ದಾನೆ ಎನ್ನುವುದನ್ನು ದೃಢಪಟ್ಟುಕೊಂಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ನಿಧಾನವಾಗಿ ಆತನನ್ನು ಮುಟ್ಟಿದಾಗ ಗಾಬರಿಯಿಂದ ಲೋಕನಾಥನ್ ಕಣ್ಣುಬಿಟ್ಟಿದ್ದಾನೆ. ಏನಾಯಿತು ಎಂದು ಕೇಳಿದ್ದಾನೆ.
ನಂತರ ಸಿಬ್ಬಂದಿ ತಮಗೆ ಏನೂ ಆಗಿಲ್ಲ, ನಿನಗೆ ಏನು ಆಯಿತೆಂದು ಎಲ್ಲರೂ ಗಾಬರಿಪಟ್ಟುಕೊಂಡಿದ್ದರು ಎಂದಿದ್ದಾರೆ.
ಆಗ ಲೋಕನಾಥನ್, ಅಯ್ಯೋ 55 ಅಡಿ ಮರವೇರಿ ಸಿಕ್ಕಾಪಟ್ಟೆ ಸುಸ್ತಾಗಿ ಹೋಯಿತು. ಅದ್ಯಾವಾಗ ಗಾಢನಿದ್ದೆ ಬಂತೋ ಗೊತ್ತೇ ಇಲ್ಲ. ಇಲ್ಲೇ ಮಲಗಿಬಿಟ್ಟಿದ್ದೆ ಎಂದಿದ್ದಾನೆ.
ಅವನ ವಿಷಯ ಕೇಳಿ ಎಲ್ಲರೂ ನಕ್ಕರೆ, ಪುಣ್ಯ ನಿದ್ದೆಯ ಮಂಪರಿನಲ್ಲಿ ಕೆಳಕ್ಕೆ ಬಿದ್ದಿದ್ದರೆ ತಮ್ಮ ಕಥೆ ಅಷ್ಟೇ ಎಂದು ಮರದ ಮಾಲೀಕ ನಿಟ್ಟುಸಿರುಬಿಟ್ಟಿದ್ದಾನೆ.
PublicNext
14/12/2020 04:00 pm