ತ್ರಿಪ್ರಯಾರ್: ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿವಾಗುವ ವಿಶಿಷ್ಟ ವಿವಾಹವೊಂದು ಕೇರಳದ ತ್ರಿಪ್ರಯಾರ್ ಪಟ್ಟಣದಲ್ಲಿ ಮದುವೆಯೊಂದಕ್ಕೆ ಸಾಕ್ಷಿಯಾಗಿದೆ.
ವಾಯುಸೇನಾ ಅಧಿಕಾರಿಯಾಗಿರುವ ತ್ರಿಪ್ರಯಾರ್ ಮೂಲದ ರಜಾಕ್ ಅವರಿಗೆ 14 ವರ್ಷಗಳ ಹಿಂದೆ ತಮಿಳುನಾಡು ಮೂಲದ ಕವಿತಾಳ ದಾರಿಯಲ್ಲಿ ಅನಾಥವಾಗಿ ಸಿಕ್ಕಿದ್ದಳು. 8ನೇ ವಯಸ್ಸಿನಿಂದಲೂ ಕವಿತಾಳನ್ನು ರಜಾಕ್ ತಮ್ಮ ನಾಲ್ಕನೇ ಮಗಳಂತೆ ಬೆಳೆಸಿದ್ದಾರೆ. ಅಷ್ಟೇ ಅಲ್ಲದೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ರಜಾಕ್ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದು, ಕವಿತಾಳನ್ನು ತಮ್ಮ ನಾಲ್ಕನೇ ಮಗಳಂತೆ ಪೋಷಿಸಿದ್ದಾರೆ. ಕವಿತಾ ಕೂಡ ರಜಾಕ್ ಕುಟುಂಬದ ಪ್ರೀತಿಯ ಮಗಳಾಗಿದ್ದಾಳೆ. ಹಲವು ವರ್ಷಗಳ ಬಳಿಕ ಕವಿತಾಳಿಗೆ ತಮ್ಮ ಸ್ವಂತ ಪಾಲಕರ ಪರಿಚಯವಾಗಿದೆ. ಸೇಲಂನಲ್ಲಿರುವ ಕವಿತಾ ಪಾಲಕರು ವರ್ಷಕ್ಕೊಮ್ಮೆ ಭೇಟಿ ಮಾಡಿಯು ಹೋಗುತ್ತಾರೆ.
ಹಿಂದೂ ಸಂಪ್ರದಾಯದಂತೆ ಕವಿತಾ ಅವರು ಖಾಸಗಿ ಕಂಪನಿಯ ಉದ್ಯೋಗಿ ಮತ್ತು ಫೋಟೋಗ್ರಾಫರ್ ಆಗಿರುವ ನಾಟ್ಟಿಕಾ ಮೂಲದ ಶ್ರೀಜಿತ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಯ ಮಗಳಿಗಾಗಿ ರಜಾಕ್ ಅವರು ಕವಿತಾಳಿಗೆ ಉಡುಗೊರೆಯಾಗಿ ತಮ್ಮ ಮನೆಯ ಸಮೀಪದಲ್ಲೇ ಹೊಸ ಮನೆಯೊಂದನ್ನು ನಿರ್ಮಿಸಿದ್ದಾರೆ.
PublicNext
06/12/2020 02:31 pm