ಇತ್ತೀಚೆಗಷ್ಟೇ ಸೊಸೆಯೊಬ್ಬಳು ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನು ನೋಡಿದ ನೆಟ್ಟಿಗರು ಪಾಪಿ ಸೊಸೆಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಅಂತಹದ್ದೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹರಿಯಾಣದ ಹಿಸಾರ್‍ನ ಆಜಾದ್ ನಗರದಲ್ಲಿ ಸೊಸೆಯೊಬ್ಬಳು 80 ವರ್ಷದ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿದ್ದಷ್ಟೇ ಅಲ್ಲದೆ ಆಕೆಯ ವಸ್ತುಗಳನ್ನು ಹೊರಗೆ ಎಸೆದಿರುವ ಘಟನೆ ನಡೆದಿದೆ.
ಸೊಸೆ ಶಕುಂತಲಾ ವಯಸ್ಸಾದ ಅತ್ತೆ ಚನ್ನೋ ಅವರ ಮೇಲೆ ಹಲ್ಲೆ ಮಾಡಿದ್ದಾಳೆ. ಈ ಚಳಿ ವಾತಾವರಣದಲ್ಲಿ ವೃದ್ಧೆ ಮನೆಯ ಹೊರಗೆ ಮಲಗಿರುವ ಸ್ಥಿತಿ ಕರುಣಾಜನಕವಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಆರೋಪಿ ಶಕುಂತಲಾಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆಜಾದ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ರೋಹ್ತಾಶ್, 'ವೃದ್ಧೆಯನ್ನು ಮನೆಯಿಂದ ಹೊರಗೆ ಹಾಕಿ ಹೊಡೆಯುವ ಹಾಗೂ ಮನೆಯಿಂದ ಹೊರ ಹಾಕಿದ ವಿಡಿಯೋ ವೈರಲ್ ಆಗಿತ್ತು. ನಾವು ವಿಚಾರಣೆ ನಡೆಸಿದಾಗ ಈ ಸಂದರ್ಭದಲ್ಲಿ, ವೃದ್ಧೆಯು ಸೊಸೆ ತನ್ನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಓಡಿಸಿದಳು ಮತ್ತು ತನ್ನ ವಸ್ತುಗಳನ್ನು ಸಹ ರಸ್ತೆಗೆ ಎಸೆದಳು ಅಂತ ದೂರಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ನಾವು ಸ್ಥಳಕ್ಕೆ ಹೋದಾಗ ವೃದ್ಧೆ ಮನೆಯ ಹೊರಗೆ ಇದ್ದಳು. ಈಗ ತನ್ನ ಎರಡನೇ ಮಗನ ಮನೆಗೆ ಕರೆದೊಯ್ಯಲಾಗಿದೆ ಎಂದು ರೋಹ್ತಾಶ್ ಹೇಳಿದ್ದಾರೆ.
PublicNext
06/12/2020 01:44 pm