ಮನಿಲಾ: ಬಾಲಕಿಯೊಬ್ಬಳು ತನಗೆ ಮತ್ತು ಅಜ್ಜಿಗೆ ಎಂದು ಒಂದು ಊಟವನ್ನು ಆರ್ಡರ್ ಮಾಡಿದ್ದಳು. ಆದರೆ ಆಕೆಯ ಮನೆ ಬಾಗಿಲಿಗೆ ಬರೋಬ್ಬರಿ 42 ಡೆಲಿವರಿ ಬಾಯ್ಸ್ ಸೇಮ್ ಅರ್ಡರ್ ತೆಗೆದುಕೊಂಡು ಬಂದಿರುವ ಘಟನೆ ಫಿಲಿಫೈನ್ಸ್‌ನಲ್ಲಿ ನಡೆದಿದೆ.
ಒಂದೇ ಮನೆಗೆ 42 ಮಂದಿ ಡೆಲಿವರಿ ಬಾಯ್ಸ್ ಬರುತ್ತಿರುವುದನ್ನು ನೋಡಿದ ಸ್ಥಳೀಯ ನಿವಾಸಿಗಳು ಬೆರಗಾಗಿದ್ದಾರೆ. ಜೊತೆಗೆ ಬಾಲಕಿ ಮನೆಗೆ ಆರ್ಡರ್ ತೆಗೆದುಕೊಂಡು ಒಬ್ಬರ ನಂತರ ಒಬ್ಬರಾಗಿ ಡೆಲಿವರಿ ಬಾಯ್ ಬರುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
ಇದಕ್ಕೆಲ್ಲ ಆ್ಯಪ್‍ನಲ್ಲಿ ಆಗಿರುವ ತಾಂತ್ರಿಕ ದೋಷವೇ ಕಾರಣವಾಗಿದೆ. ಫುಡ್ ಆರ್ಡರ್ ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ಬಾಲಕಿ ಮಾಡಿರುವ ಆರ್ಡರ್ ಸಂದೇಶವು 42 ಫುಡ್ ಡೆಲಿವರಿ ಬಾಯ್ಸ್‌ಗೆ ಹೋಗಿತ್ತು. ಪರಿಣಾಮ 42 ಮಂದಿಯೂ ಆಹಾರ ತೆಗೆದುಕೊಂಡು ಬಾಲಕಿಯ ಮನೆಗೆ ಬಂದಿದ್ದರು ಎನ್ನುವುದು ಬಳಿಕ ಸ್ಪಷ್ಟವಾಗಿದೆ.
PublicNext
03/12/2020 06:21 pm