ಗಾಂಧಿನಗರ: 29 ವಯಸ್ಸಿನ 5.5 ಅಡಿ ಎತ್ತರದ ಅಂಧ ಯುವತಿ, ತನಗಿಂತ 13 ವರ್ಷದ ದೊಡ್ಡವನಾಗಿರುವ ೩ ಅಡಿ ಎತ್ತರದ ಶಿಕ್ಷಕರೊಬ್ಬರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಗುಜರಾತಿನ ಜುನಾಗಢ ನಗರ ಈ ವಿಶೇಷ ಮದುವೆಗೆ ಸಾಕ್ಷಿಯಾಗಿದೆ. ಶಾಂತಾ ಮತ್ತು ರಮೇಶ್ ಸತಿ-ಪತಿಗಳಾಗಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮದುವೆಗೆ ಆಗಮಿಸಿದ ಅತಿಥಿಗಳು ನವಜೋಡಿಗೆ ಶುಭ ಹಾರೈಸಿ ಸಂತೋಷದಿಂದ ಫೋಟೋ ಕ್ಲಿಕ್ಕಿಸಿಕೊಂಡರು.
ಶಾಂತಾ ಹುಟ್ಟು ಅಂಧೆಯಾಗಿದ್ದು, ಪದವಿ ಬಳಿಕ ಬಿ.ಎಡ್ ಪೂರೈಸಿದ್ದಾರೆ. ಸೇವಾ ಯುವಕ ಮಂಡಳಿಯ ಯುವತಿಯರ ಹಾಸ್ಟೆಲ್ ನಲ್ಲಿದ್ದರು. ಸದ್ಯ ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ರಮೇಶ್ ಜೊತೆ ಮದುವೆ ಆಗಿದ್ದಾರೆ.
PublicNext
01/12/2020 07:03 pm