ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಣಂತಿ, ನವಜಾತ ಶಿಶುವನ್ನು ಹೊತ್ತು ಸುರಕ್ಷಿತವಾಗಿ ಮನೆ ಸೇರಿಸಿದ ಸೈನಿಕರು

ಶ್ರೀನಗರ: ಯಾವುದೇ ತಾರತಮ್ಯವಿಲ್ಲದೆ ಸಂಕಷ್ಟದಲ್ಲಿರುವ ಜನರಕ್ಕೆ ಭಾರತೀಯ ಯೋಧರು ನಿಲ್ಲುತ್ತಾರೆ. ಅದೇ ರೀತಿ ಕಾಶ್ಮೀರಿ ಮಹಿಳೆ ಹಾಗೂ ಅವರ ನವಜಾತ ಶಿಶುವನ್ನು ಹೊತ್ತು ಸುರಕ್ಷಿತವಾಗಿ ಮನೆ ಸೇರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವರದಿಗಳ ಪ್ರಕಾರ, ಕುಪ್ವಾರಾ ಜಿಲ್ಲೆಯ ಲೋಲಾಬ್ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಶುಕ್ರವಾರ ಬೆಳಿಗ್ಗೆ ಮನೆಗೆ ಹೊರಟಿದ್ದರು. ಆದರೆ ಅಹಿತಕರ ಹವಾಮಾನ ಮತ್ತು ಹಿಮದಿಂದ ಆವೃತವಾದ ರಸ್ತೆಗಳಿಂದಾಗಿ ಯಾವುದೇ ವಾಹನ ಅಥವಾ ಇತರ ಸಾರಿಗೆ ವ್ಯವಸ್ಥೆ ಇಲ್ಲದೆ ಮಹಿಳೆ ಕಂಗಾಲಾಗಿದ್ದರು. ಹೀಗಾಗಿ ಮನೆ ತಲುಪಲು ಮಹಿಳೆಗೆ ಭಾರತ ಸೇನೆಯ ಯೋಧರು ಸಹಾಯ ಮಾಡಿದ್ದಾರೆ.

Edited By : Vijay Kumar
PublicNext

PublicNext

27/11/2020 11:02 pm

Cinque Terre

84.44 K

Cinque Terre

7