ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಲ್ಲಿದ್ದಾನೆ ನೋಡಿ ವಿಶ್ವದ ಅತಿ ಎತ್ತರದ ಬಾಲಕ!

ಬೀಜಿಂಗ್: ಚೀನಾದ 14 ವರ್ಷದ ಬಾಲಕನೊಬ್ಬ ವಿಶ್ವದ ಅತೀ ಎತ್ತರದ ಹದಿಹರೆಯದ ಪುರುಷ ಎಂಬ ದಾಖಲೆಯನ್ನು ಮಾಡಿದ್ದಾನೆ.

ರೆನ್ ಕಿಯು(14) 7 ಅಡಿ ಮೇಲೆ ಮೂರು ಇಂಚು ಎತ್ತರವಿದ್ದಾನೆ. ಈತ ಚೀನಾದ ಸಿಚುವಾನ್ ಪ್ರಾಂತ್ಯದ ಲೆಶನ್ ನಗರದ ಜ್ಯೂನಿಯರ್ ಹೈಸ್ಕೂಲ್ ವಿಧ್ಯಾರ್ಥಿಯಾಗಿದ್ದಾನೆ. ರೆನ್ 18 ವರ್ಷ ವಯಸ್ಸಿನವರಿಗಿಂತ ಕೆಳಗಿನ ಪುರುಷರ ವಿಭಾಗದಲ್ಲಿ ಅತೀ ಎತ್ತರದ ಟೀನೇಜರ್ ಎಂಬ ಗಿನ್ನಿಸ್ ವಿಶ್ವ ದಾಖಲೆಯ ಪುಟದಲ್ಲಿ ಸೇರಿದ್ದಾನೆ.

ನಾನು ಶಾಲೆಗೆ ಪ್ರವೇಶಿಸಿದಾಗಿನಿಂದ ನನ್ನ ವಯಸ್ಸಿನ ಸ್ನೇಹಿತರಿಗಿಂತ ನಾನು ಎತ್ತರವಾಗಿರುವುದನ್ನು ಗಮನಿಸಿದ್ದೇನೆ. ನನ್ನ ಎತ್ತರವನ್ನು ನೋಡಿ ಹಲವರು ನನ್ನನ್ನು ದೊಡ್ಡವನು ಎಂದು ಭಾವಿಸುತ್ತಿದ್ದರು. ಇದರಿಂದ ಕೊಂಚ ಬೇಸರವಾಗುತ್ತಿತ್ತು. ಆದರೆ ಇದೇ ಎತ್ತರದಿಂದ ಏನನ್ನಾದರೂ ಸಾಧನೆ ಮಾಡಬೇಕು ಎಂದು ಆಲೋಚಿಸಿದೆ. ಆಗ ವಿಶ್ವ ದಾಖಲೆಯನ್ನು ಪಡೆಯಬಹುದೇ ಎಂದು ಪ್ರಯತ್ನಿಸಿದೆ. ಅದರ ಪ್ರತಿಫಲವಾಗಿ ಈಗ ಗಿನ್ನಿಸ್ ದಾಖಲೆ ಪಡೆದಿದ್ದೇನೆ ಎಂದು ರೆನ್ ಕಿಯು ಸಂತಸ ವ್ಯಕ್ತ ಪಡಿಸಿದ್ದಾನೆ.

Edited By : Nagaraj Tulugeri
PublicNext

PublicNext

19/11/2020 03:33 pm

Cinque Terre

40.01 K

Cinque Terre

1

ಸಂಬಂಧಿತ ಸುದ್ದಿ