ಭುವನೇಶ್ವರ: ಒಡಿಶಾ ಹಳ್ಳಿಯ 11 ವರ್ಷದ ಬಾಲಕಿ 10 ಕಿಲೋಮೀಟರ್ ನಡೆದು ತನ್ನ ತಂದೆಯ ವಿರುದ್ಧ ಕೇಂದ್ರಪಾರ ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಡುಕುಕಾ ವಿದ್ಯಾಪಿತಾ ವಿದ್ಯಾರ್ಥಿನಿ ಸುಶ್ರೀ ಸಂಗೀತಾ ಸೇಥಿ ಅವರು ಜಿಲ್ಲಾಧಿಕಾರಿ ಸಮರ್ತ್ ವರ್ಮಾ ಅವರಿಗೆ ಲಿಖಿತ ದೂರು ನೀಡಿದ್ದಾರೆ. ನನ್ನ ತಂದೆ ರಮೇಶ್ ಚಂದ್ರ ಸೇಥಿ ಅವರು ಮಧ್ಯಾಹ್ನದ ಊಟದ ಹಣ ಮತ್ತು ತನಗೆ ಮಂಜೂರು ಮಾಡಿದ ಅಕ್ಕಿಯನ್ನು ಬಲವಂತವಾಗಿ ಕಿತ್ತುಕೊಂಡು ಹೋಗುತ್ತಿದ್ದಾರೆ' ಎಂದು ಸುಶ್ರೀ ಆರೋಪಿಸಿದ್ದಾರೆ.
ನನ್ನ ತಾಯಿ ತೀರಿಕೊಂಡ ಬಳಿಕ ತಂದೆ ಮತ್ತೊಂದು ಮದುವೆಯಾಗಿದ್ದಾರೆ. ಹೀಗಾಗಿ ತಂದೆ ಹಾಗೂ ಮಲತಾಯಿ ನನ್ನನ್ನು ನೋಡಿಕೊಳ್ಳಲು ನೀರಾಕರಿಸಿದ್ದಾರೆ ಎಂದು ಬಾಲಕಿ ದೂರಿದ್ದಾರೆ.
PublicNext
17/11/2020 03:45 pm