ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೇಳೋದೊಂದು, ಮಾಡಿದ್ದು ಇನ್ನೊಂದು: ಪೇಚಿಗೆ ಸಿಲುಕಿದ ವಿರಾಟ್ ಕೊಹ್ಲಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪೇಚಿಗೆ ಸಿಲುಕಿದ್ದಾರೆ‌. ದೇಶದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿರುವ ಅವರು ಈ ಬಾರಿ ಪಟಾಕಿ ಹಚ್ಚದೇ ಶಾಂತಿಯುತ ದೀಪಾವಳಿ ಆಚರಿಸುವಂತೆ ಮನವಿ ಮಾಡಿದ್ದರು.

ವಿಷಯ ಇರೋದು ಇಲ್ಲಿಯೇ‌. ಪಟಾಕಿ ಹಚ್ಚಬೇಡಿ ಎಂದ ವಿರಾಟ್ ತಮ್ಮ ಹುಟ್ಟು ಹಬ್ಬದ ಆಚರಣೆ ವೇಳೆ ಅಭಿಮಾನಿಗಳಿಗೆ ಪಟಾಕಿ ಹೊಡೆಯಲು ಆಸ್ಪದ ಕೊಟ್ಟಿದ್ದರು. ಅಂದು ಬಾನಿನ ತುಂಬ ಚಿತ್ತಾರ ಮೂಡುವಂತೆ ಪಟಾಕಿ ಹೊಡೆಯಲಾಗಿತ್ತು. ಈ ಇಬ್ಬಗೆಯ ಧೋರಣೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ವಿಡಿಯೋ ಸಮೇತ ಟ್ವೀಟ್ ಮಾಡಿರುವ ಶೆಫಾಲಿ ವೈದ್ಯ ಎಂಬುವವರು ವಿರಾಟ್ ಕೊಹ್ಲಿ ಅವರ ಹೆಸರು ಉಲ್ಲೇಖಿಸಿದ್ದಾರೆ‌. ಕ್ರಿಕೆಟ್ ಆಡುವುದರ ಕಡೆ ಗಮನ ಕೊಡಿ‌. ದೀಪಾವಳಿ ಹಬ್ಬವನ್ನು ಹೇಗೆ ಆಚರಿಸಬೇಕೆಂದು ನಮಗೆ ಉಪದೇಶ ಕೊಡಲು ಬರಬೇಡಿ ಎಂದು ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

14/11/2020 11:02 pm

Cinque Terre

88.69 K

Cinque Terre

4