ಗ್ವಾಲಿಯರ್ (ಮಧ್ಯಪ್ರದೇಶ)- ಸುಮಾರು 15 ವರ್ಷಗಳ ಹಿಂದೆ ಅಚಾನಕ್ಕಾಗಿ ನಾಪತ್ತೆಯಾಗಿದ್ದ ಪೊಲೀಸ್ ಆಫೀಸರ್ ಈಗ ಭಿಕ್ಷುಕನಾಗಿ ಪತ್ತೆಯಾಗಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಭಿಕ್ಷೆ ಕೇಳುತ್ತ ಅಲೆಯುತ್ತಿದ್ದ ಅವರನ್ನು ಅವರ ಹಳೆಯ ಸಹೋದ್ಯೋಗಿಗಳು ಗುರುತಿಸಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮನೀಶ್ ಮಿಶ್ರಾ 2005ರಲ್ಲಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. 1999ರಲ್ಲಿ ಇಲಾಖೆ ಸೇರಿದ್ದ ಅವರಿಗೆ ಮಾನಸಿಕ ಖಿನ್ನತೆ ಕಾಡುತ್ತಿತ್ತು. ಚಿಕಿತ್ಸೆ ಕೊಡಿಸಿದರು ಗುಣವಾಗಿರಲಿಲ್ಲ. ಹೀಗಿರುವಾಗ ಅವರು ಒಂದು ದಿನ ಅವರು ನಾಪತ್ತೆಯಾಗಿದ್ದರು.
ಇತ್ತೀಚೆಗೆ ಮನೀಶ್ ಮಿಶ್ರಾ ಅವರ ಸಹೋದ್ಯೋಗಿಗಳು ಗ್ವಾಲಿಯರ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮನೀಶ್ ಮಿಶ್ರಾ ಅವರಲ್ಲಿ ಭಿಕ್ಷೆ ಕೇಳಿದ್ದಾರೆ. ಚಳಿಯಿಂದ ನಡುಗುತ್ತಿದ್ದ ಅವರಿಗೆ ತಮ್ಮ ಜಾಕೆಟ್ ನೀಡಿದ್ದಾರೆ. ಆಗ ಮನೀಶ್ ಅವರ ಹೆಸರು ಹೇಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ಇದರಿಂದ ಅಚ್ಚರಿಗೊಂಡ ಸಹೋದ್ಯೋಗಿಗಳು ಮನೀಶ್ ಮಿಶ್ರಾ ಅವರನ್ನು ಗುರುತಿಸಿದ್ದಾರೆ.
ಕೂಡಲೇ ಅವರನ್ನು ಸ್ಥಳೀಯ ಎನ್ ಜಿ ಒದಲ್ಲಿ ಸೇರಿಸಲಾಗಿದೆ.
PublicNext
14/11/2020 09:08 pm