ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಿಮಾಕ್ ತೋರಿಸಿದ್ರೆ ಕೊನೆಗೆ ಇದೇ ಗತಿ

ಕೆಲವರಿಗೆ ಹುಂಬತನಸ ಮೈಗೂಡಿರುತ್ತದೆ. ಪ್ರವಾಹ ಸಂದರ್ಭದಲ್ಲಿ ಧಿಮಾಕ್ ತೋರಿಸಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಅನೇಕ ಉದಾಹರಣೆಗಳಿವೆ. ಹೀಗೆ ಯುವಕನೊಬ್ಬ ಹುಂಬತನ ತೋರಿಸಲು ಹೋಗಿ ಭರ್ಜರಿ ಏಟು ತಿಂದಿದ್ದಾನೆ.

ಹೌದು.. ಮಹಾ ಮಳೆಯಿಂದಾಗಿ ನದಿಯು ಪ್ರವಾಹ ಮಟ್ಟ ಮೀರಿ ಹರಿಯುತ್ತಿತ್ತು. ನೀರು ಸೇತುವೆ ಮೇಲೆ ಹತ್ತಿ ರಭಸವಾಗಿ ಹರಿಯುತ್ತಿದ್ದರೂ ಯುವಕನೊಬ್ಬ ಒಂದು ಬದಿಯಿಂದ ಇನ್ನೊಂದು ಬದಿಗೆ ನಡೆದುಕೊಂಡು ಬರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಯುವಕ ಇನ್ನೇನು ದಡ ಸೇರುತ್ತಿದ್ದಂತೆ ಸ್ಥಳದಲ್ಲಿದ್ದ ಹಿರಿಯರಿಬ್ಬರು ಆತನಿಗೆ ಥಳಿಸಿದ್ದಾರೆ.

ಇಷ್ಟು ರಭಸವಾಗಿ ನೀರು ಹರಿಯುತ್ತಿದೆ. ಇಂತದ್ರಲ್ಲಿ ಧಿಮಾಕ್ ತೋರಿಸೋಕೆ ಹಿಂಗೆ ಮಾಡ್ತೀಯಾ ಎನ್ನುತ್ತಲೇ ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ನಡಿ ಇಲ್ಲಿಂದು ಎಂದು ಆತನಿಗೆ ಗದರಿಸಿದ್ದಾರೆ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ಸೂಪರ್‌ ಶಾಟ್. ಹಾಕಿ ಹಾಕಿ ಇನ್ನೂ ನಾಲ್ಕು ಏಟು ಹಾಕಬೇಕಿತ್ತು. ಒಳ್ಳೆ ಕೆಲಸ ಮಾಡಿದ್ದೀರಾ ಎಂದು ಮುಖಂಡರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : Nagesh Gaonkar
PublicNext

PublicNext

12/11/2020 07:57 pm

Cinque Terre

180.99 K

Cinque Terre

15

ಸಂಬಂಧಿತ ಸುದ್ದಿ