ಎಲ್ಲರಿಗಿಂತ ಡಿಫ್ರೆಂಟ್ ಆಗಿ ಕಾಣಲು ಕೆಲವರು ಕೋಟ್ಯಂತರ ಹಣ ಖರ್ಚು ಮಾಡುತ್ತಾರೆ. ಮೈತುಂಬ ಟ್ಯಾಟೂ ಹಾಕಿಸಿಕೊಳ್ಳುವುದು ಟ್ರೆಂಡ್ ಆಗಿದೆ. ಅಷ್ಟೇ ಅಲ್ಲದೆ ಕೆಲವರು ಇದೇ ಹವ್ಯಾಸದಿಂದ ಗಿನ್ನಿಸ್ ವಿಶ್ವದಾಖಲೆ ಮಾಡಿದ್ದಾರೆ. ಇಂತಹದ್ದೇ ಹವ್ಯಾಸಕ್ಕೆ ಕೈ ಹಾಕಿರುವ ವ್ಯಕ್ತಿಯೊಬ್ಬ ಓರ್ಕ್ ಅವತಾರದಲ್ಲಿ ಕಾಣಲು ವಿಚಿತ್ರ ಬಾಡಿಮಾಡಿಫಿಕೇಷನ್ ಮಾಡಿಸಿಕೊಂಡಿದ್ದಾನೆ.
ಬಾಡಿಮಾಡಿಫಿಕೇಷನ್ ಕ್ರೇಜ್‌ನಿಂದ ಅತ್ಯಂತ ವಿಕಾರವಾಗಿ ಕಾಣುತ್ತಿರುವ ವ್ಯಕ್ತಿಯೊಬ್ಬನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈತ ತಾನು ವಿಭಿನ್ನವಾಗಿ ಕಾಣಬೇಕು ಎಂಬ ಕಾರಣಕ್ಕೆ ಎರಡು ಕೋರೆ ಹಲ್ಲುಗಳನ್ನು ಹಾಕಿಸಿಕೊಂಡಿದ್ದಾನೆ.
ಪರಾಗ್ವೆ ಮತ್ತು ಬ್ರೆಜಿಲ್ ಗಡಿಯಲ್ಲಿರುವ ಇಗುಟೆಮಿ ಮೂಲದ ಓರ್ಕ್, ಈಗಾಗಲೇ ತನ್ನ ದೇಹದ ಮೇಲೆ ಶೇ. 80ರಷ್ಟು ಟ್ಯಾಟೂ ಹಾಕಿಸಿಕೊಂಡಿದ್ದಾನೆ.
PublicNext
06/11/2020 09:48 pm