ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಕೃಷಿಯಲ್ಲಿ ಬತ್ತದ ಹುಮ್ಮಸ್ಸು; ಇಳಿವಯಸ್ಸಿನಲ್ಲೂ ದುಡಿಮೆ ಸಲೀಸು

ನರಗುಂದ: ವಯಸ್ಸು ಎಷ್ಟಾದರೇನು ? ಕೃಷಿಯಲ್ಲಿ ಹೊಸ ಸಾಧನೆ ಮಾಡಬೇಕೆಂಬ ಹಂಬಲ ಆ ವಯಸ್ಸಿಗೆ ಹೊಸ ಹರುಪನ್ನು ತಂದು ಕೃಷಿಯಲ್ಲಿ ಖುಷಿಯನ್ನು ಕೊಡುತ್ತದೆ.

ಇಂತಹ ಖುಷಿಯನ್ನು ಕಂಡು ಇಳಿವಯಸ್ಸಿನಲ್ಲೂ ಮಾಸದ ಬೇಸಾಯದ ಸವಿರುಚಿ ಅನುಭವಿಸುತ್ತಿರುವವರೇ ನರಗುಂದ ತಾಲೂಕಿನ ಯಾಸಾ ಹಡಗಲಿ ಗ್ರಾಮದ ಪ್ರಗತಿಪರ ರೈತ ಗದಿಗೆಪ್ಪ ಯಲ್ಲಪ್ಪ ಹಣುಮಕ್ಕನವರ.

ದೇಶಪಾಂಡೆ ಫೌಂಡೇಶನ್ ನೀಡಿದ ಮಹತ್ವಾಕಾಂಕ್ಷಿ ಕೃಷಿಹೊಂಡದ ಕೊಡುಗೆಯ ಲಾಭ ಪಡೆದು ತಾವೂ ಸಹ ತಮ್ಮ 8 ಎಕರೆ ಜಮೀನಿನಲ್ಲಿ 75/75 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಭೂತಾಯಿಯ ಸೇವೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.

ಒಣಬೇಸಾಯದ ಮಾರ್ಗದ ಕಷ್ಟಕ್ಕೆ ಬೈ ಬೈ ಹೇಳಿದ ಕೃಷಿಹೊಂಡ, ಹೊಲದಲ್ಲೇ ಜಲವನ್ನು ಕಟ್ಟಿ ಹಾಕಿ ತಮ್ಮಿಷ್ಟದ ಫಲ ಬೆಳೆಯುವ ಮಾರ್ಗ ನೀಡಿದೆ. ಹಾಗಿದ್ರೇ ಆ ಕೃಷಿಹೊಂಡದ ಸಾಧಕವೇನು ? ಕೃಷಿಹೊಂಡ ಬೆಳೆಗೆ ಹೇಗೆ ಸಹಕಾರಿ ? ಎಂಬುದರ ಕುರಿತು ರೈತ ಗದಿಗೆಪ್ಪ ಜೊತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ...

Edited By : Manjunath H D
PublicNext

PublicNext

08/09/2022 08:22 pm

Cinque Terre

139.44 K

Cinque Terre

0

ಸಂಬಂಧಿತ ಸುದ್ದಿ