ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಕೋಟಿ ವಿದ್ಯೆಯಲ್ಲಿ ಮೇಟಿ ವಿದ್ಯೆಯೇ ಮೇಲು; ಕೃಷಿ ಹೊಂಡಕ್ಕೆ ರೈತ ಎಂದ ಜೈ

ನರಗುಂದ: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು... ಇದು ಆಗಾಗ ಹಿರಿಯರ ಬಾಯಿಂದ ಅದೆಷ್ಟೋ ಬಾರಿ ವಿದ್ಯಾವಂತರ ಕಿವಿಗೆ ಬೀಳುತ್ತಿರುವ ಮಾತು. ಇದೀಗ ಇದೇ ಮಾತನ್ನು ಇಲ್ಲೊಬ್ಬ ವಿದ್ಯಾವಂತ ನಿರೂಪಿಸಿ, ಮೇಟಿ ವಿದ್ಯೆಯಲ್ಲೇ ಜಯವಿದೆ ಎಂದು ಸಾಧಿಸಿ ತೋರಿಸಿದ್ದಾರೆ.

ನಾವೆಷ್ಟೇ ಶಿಕ್ಷಣ ಪಡೆದರೂ ಅದರಲ್ಲಿ ಮೇಟಿ ಅಂದ್ರೇ, ರೈತಾಪಿ ಕಾಯಕವೇ ಮೇಲೂ ಎಂಬ ತಾತ್ಪರ್ಯದಂತೆ ಬಿಎ ಪದವೀಧರನಾದರೂ ಕೃಷಿಯಲ್ಲಿ ಆಳಾಗಿ, ಅರಸನಾಗಿ ಯಜಮಾನನಾದ ನರಗುಂದ ತಾಲೂಕಿನ ಕೌಜಗೇರಿ ಎಂಬ ಪುಟ್ಟ ಹಳ್ಳಿಯ ರೈತ ಸೋಮಶೇಖರ್ ಅಲಿಯಾಸ್ ಸೋಮಪ್ಪ ತಮ್ಮ 20 ಎಕರೆ ಜಮೀನಿನಲ್ಲಿ ವಾರ್ಷಿಕ 10 ಲಕ್ಷ ಆದಾಯ ಗಳಿಸಿದ್ದಾರೆ.

ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ತಮ್ಮ 20 ಎಕರೆ ಜಮೀನಿನಲ್ಲಿ 100×100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಹೆಸರು, ಮೆಣಸಿನಕಾಯಿ, ಈರುಳ್ಳಿ ಬೆಳೆದ ಇವರು ಕೃಷಿಯಲ್ಲಿ ಕೈಗೊಂಡ ಪ್ರಗತಿಪರ ಬದಲಾವಣೆ ಕುರಿತು ರೈತ ಸೋಮಶೇಖರ್ ಜೊತೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ...

Edited By : Manjunath H D
PublicNext

PublicNext

07/09/2022 08:05 pm

Cinque Terre

136.63 K

Cinque Terre

1