ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ದುಡಿಯುವ ಕೈಗಳಿಗೆ ನಿತ್ಯ ಹಬ್ಬ, ಕೃಷಿಹೊಂಡ ನಿರ್ಮಾಣ ಸ್ವರ್ಗ

ನರಗುಂದ: ಆ ರೈತನದು ಎಂಟು ಎಕರೆ ಜಮೀನು. ಆ ಜಮೀನಿನಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಹಸಿರು ಪೈರು! ದುಡಿಯುವ ಕೈಗಳಿಗೆ ಮತ್ತಷ್ಟೂ ಶಕ್ತಿ ತುಂಬಿದ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣದ ಫಲವಾಗಿ ಇಲ್ಲೊಬ್ಬ ಬಿ.ಕಾಮ್ ಪದವೀಧರನ ಬಾಳಲ್ಲಿ ಹೊಸ ಬೆಳಕು ಮೂಡಿದೆ.

ನರಗುಂದ ತಾಲೂಕಿನ ಯಾಸಾ ಹಡಗಲಿ ಗ್ರಾಮದ ರೈತ ಪದವೀಧರ ಶಿವಾನಂದ ಯಲ್ಲಪ್ಪ ಸವದತ್ತಿ ತನ್ನ 8 ಎಕರೆ 37 ಗುಂಟೆ ಜಮೀನಿನಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100×100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಅತ್ಯುತ್ತಮ ಫಸಲನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪ್ರಸಕ್ತ ಮುಂಗಾರು ಗೋವಿನಜೋಳ, ಹೆಸರು, ಹತ್ತಿ, ಈರುಳ್ಳಿ, ಮೆಣಸಿನಕಾಯಿ ಈ ಹಿಂದೆ ಕಳೆದ ವರ್ಷ ಹಿಂಗಾರು ಜೋಳ, ಗೋಧಿ, ಕಡಲೆ ಬೆಳೆದ ರೈತ ಶಿವಾನಂದ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡದಿಂದ ಪಡೆದ ಲಾಭ ಏನು ಎಂಬುದನ್ನು ಅವರಿಂದಲೇ ಕೇಳಿ.

ಕೃಷಿಹೊಂಡ ಕೇವಲ ಭೂ ತಾಯಿ ಮಡಿಲು ಪೈರಿಗೆ ನೀರುಣಿಸಲು ಅಷ್ಟೇ ಅಲ್ಲದೆ, ಮಣ್ಣಿನ ಸವಕಳಿ ತಡೆಗೆ, ಮಣ್ಣಿನ ಪೋಷಕಾಂಶ ಹೆಚ್ಚಿಸಲು ಸಹ ಸಹಕಾರಿಯಾಗಿ, ಕ್ರಿಮಿನಾಶಕ ಸಿಂಪಡಣೆ ಜಲಕ್ಕೂ ಅನುಕೂಲವಾಗಿ ವಾರ್ಷಿಕ 8 ಎಕರೆಗೆ 5 ಲಕ್ಷ ಆದಾಯ ಗಂಟಿಕ್ಕುತ್ತಿದ್ದ ರೈತನಿಗೆ 10 ಲಕ್ಷ ನಿವ್ವಳ ಆದಾಯದ ಮಾರ್ಗ ತೋರಿದೆ.

ಒಟ್ಟಾರೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಕೃಷಿಯನ್ನು ಉನ್ನತೀಕರಣ ಮಾಡಿ ಪ್ರತಿಭಾವಂತರಿಗೆ ಮಣ್ಣಲ್ಲೇ ಅನ್ನ ನೀಡಿದೆ.

Edited By : Manjunath H D
PublicNext

PublicNext

06/09/2022 06:21 pm

Cinque Terre

174.71 K

Cinque Terre

0

ಸಂಬಂಧಿತ ಸುದ್ದಿ