ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಡಿಪ್ಲೊಮಾ ಪದವೀಧರ ಕೃಷಿಯಲ್ಲಿ ವೀರ; ದುಡಿಮೆಯಲ್ಲಿ ರಣಧೀರ

ನರಗುಂದ: ರೈತಾಪಿ ವರ್ಗವನ್ನು ಸುಧಾರಿಸುವ ನಿಟ್ಟಿನಲ್ಲಿ ಒಂದು ಸರ್ಕಾರ ಮಾಡಬೇಕಾದ ಮಹತ್ವಪೂರ್ಣ ಕಾರ್ಯವನ್ನು ಇಲ್ಲೊಂದು ಸಂಸ್ಥೆ ಮಾಡಿ ಉತ್ಸಾಹಿ ರೈತರಿಗೆ ಹೊಸ ಅವಕಾಶ ನೀಡಿದೆ.

ರೈತರಿಗೆ ಕೃಷಿಹೊಂಡ, ಬೀಜ ವಿತರಣೆ, ಗೊಬ್ಬರ ಪೂರೈಕೆ, ಕ್ರಿಮಿನಾಶಕ ಔಷಧ ಪೂರೈಕೆ ಹೀಗೆ ಸಾಲು ಸಾಲು ರೈತರ ಪ್ರಗತಿ ಕೆಲಸಗಳನ್ನು ದೇಶಪಾಂಡೆ ಫೌಂಡೇಶನ್ ಆಸಕ್ತ ವಿದ್ಯಾವಂತರಿಗೆ ಕೃಷಿಯ ಲಾಭವನ್ನು ಪರಿಚಯಿಸಿದೆ.

ಅಂತಹ ವಿದ್ಯಾವಂತ ರೈತರಲ್ಲಿ ಒಬ್ಬರಾದ ನರಗುಂದ ತಾಲೂಕಿನ ಯಾವಗಲ್ ಗ್ರಾಮದ ರೈತ ಬಸವರಾಜ ತಹಶೀಲ್ದಾರರ ಇವ್ರು ಓದಿದ್ದು ಡಿಪ್ಲೊಮಾ ಸಿವಿಲ್ ಆದ್ರೂ ಮಾಡುತ್ತಿರುವುದು ಮಾತ್ರ ಜಗತ್ತಿಗೆ ಅನ್ನ ನೀಡುವ ಹೆಮ್ಮೆಯ ಕಾಯಕ.

ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 6 ಎಕರೆ 20 ಗುಂಟೆ ಜಮೀನಿಗೆ ನೆರವಾಗಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡ ಇವರು, ತಮ್ಮ ಜಮೀನಿನಲ್ಲಿ ಈಗಾಗಲೇ ತೆಂಗು ಬೆಳೆಯುವ ಪ್ರಾಯೋಗಿಕ ಪರೀಕ್ಷೆ ಕೈಗೊಂಡಿದ್ದು, ಮುಂಗಾರು ವಾಣಿಜ್ಯ ಬೆಳೆ ಹತ್ತಿ, ಹೆಸರು, ಮೆಣಸಿನಕಾಯಿ ಉತ್ತಮ ಫಸಲನ್ನು ಕೈಗೊಂಡು ವಾರ್ಷಿಕ ದುಪ್ಪಟ್ಟು ಆದಾಯ ಅಂದ್ರೇ ಎಕರೆ ಭೂಮಿಗೆ ಕನಿಷ್ಠ 60 ಸಾವಿರ ಆದಾಯ ಪಡೆದಿದ್ದಾರೆ.

ತಾನಾಯ್ತು ತನ್ನ ಕೃಷಿ ಬದುಕಾಯ್ತು ಎಂಬಂತೆ ಹೊಸ ಆಲೋಚನೆಯಲ್ಲೇ ಇರುವ ರೈತ ಬಸವರಾಜ ತಹಶೀಲ್ದಾರ, ದೇಶಪಾಂಡೆ ಫೌಂಡೇಶನ್ ಸಹಕಾರಕ್ಕೆ ಅದರಿಂದ ಕೃಷಿಯಲ್ಲಾದ ಬದಲಾವಣೆಗೆ ಸಲಾಂ ಅಂತಾರೇ.

Edited By : Manjunath H D
PublicNext

PublicNext

05/09/2022 05:00 pm

Cinque Terre

200.51 K

Cinque Terre

1