ನರಗುಂದ: ಭೂತಾಯಿಯ ಕೃಷಿಯಲ್ಲಿ ಆಕೆಯ ಮಡಿಲಲ್ಲಿ ನಿತ್ಯ ಕಾಯಕ ಮಾಡುವ ಅನ್ನದಾತನಿಗೆ ಇದೀಗ ಯೋಗ ಒಲಿದು ಬಂದಿದ್ದು ಕೃಷಿಹೊಂಡ ಸಂತಸದ ಫಲ, ಆದಾಯ, ಎಲ್ಲಕ್ಕಿಂತ ಮಿಗಿಲಾಗಿ ಹೊಸ ಹುಮ್ಮಸ್ಸು ನೀಡಿದೆ.
ಅರೆ... ಕೇವಲ ರೈತಾಪಿ ಜನ ಮಾತ್ರವೇ ಅಲ್ಲಾ ಆಧುನಿಕ ಕೃಷಿ ಪದ್ಧತಿಗೆ ಉದ್ಯೋಗಸ್ಥರು, ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಸಹ ಮನಸೋತು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಕೃಷಿಯಲ್ಲಿ ಒಂದು ಕೈ ನೋಡೋಣ ಎಂದು ಹೊಸ ಆದಾಯ ಗಳಿಸಿದ್ದಾರೆ.
ಅದರಂತೆ ನರಗುಂದ ತಾಲೂಕಿನ ಯಾಸಾ ಹಡಗಲಿ ಗ್ರಾಮದ ಪ್ರಗತಿಪರ ರೈತ ಸಿದ್ಧಪ್ಪ ಗುರುಶಿದ್ದಪ್ಪ ಅಂದಾನಪ್ಪವರ ತನ್ನ ಏಳು ಎಕರೆ ಜಮೀನಿನಲ್ಲಿ 50/50 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಪ್ರಸಕ್ತ ಮುಂಗಾರು ಗೋವಿನಜೋಳ, ಹೆಸರು, ಈರುಳ್ಳಿ, ಮೆಣಸಿನಕಾಯಿ ಬೆಳೆದಿದ್ದು ಕಳೆದ ವರ್ಷ ಹಿಂಗಾರು ಕಡಲೆ ಗೋಧಿ, ಕುಸುಬೆ ಬೆಳೆಯ ನಿವ್ವಳ ವರಮಾನ ಪಡೆದಿದ್ದಾರೆ.
ಇದಲ್ಲದೆ ತೋಟಗಾರಿಕೆ, ತರಕಾರಿ ಬೆಳೆಗೂ ಸೈ ಎಂದ ಸಿದ್ಧಪ್ಪ ತಮ್ಮ ಕೃಷಿ ಬದುಕಿನಲ್ಲಿ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡ ಕೊಡುಗೆಯ ಕುರಿತು ಪಬ್ಲಿಕ್ ನೆಕ್ಸ್ಟ್ ನಡೆಸಿದ ಚಿಟ್ ಚಾಟ್ ಇಲ್ಲಿದೆ...
PublicNext
30/08/2022 06:47 pm