ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಭೂತಾಯಿ ಗರ್ಭದಲ್ಲಿ ಜಲಧಾರೆ, ಕೃಷಿಹೊಂಡ ರಹದಾರಿ

ನವಲಗುಂದ : ರೈತರ ಕೃಷಿ ಭೂಮಿ ಸಾಕಾರದ ಫಲವೋ, ಪರ್ಯಾಯ ಬೆಳೆಗೆ ಅನುಕೂಲದ ವರವೋ, ಕೃಷಿಯಲ್ಲಿ ಹೊಸ ಸಾಧನೆಯ ರಹದಾರಿಯೋ, ಭೂತಾಯಿಯ ಗರ್ಭದಲ್ಲಿ ಜಲಧಾರೆ ತುಂಬುವ ಕೃಷಿಹೊಂಡ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

ಹೌದು ! ಅನ್ನದಾತನ ಕೃಷಿ ಕಾಯಕಕ್ಕೆ ನೆರವಾಗಲು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ಕೃಷಿಹೊಂಡ ನಿರ್ಮಾಣ ಕಾಮಗಾರಿ ನವಲಗುಂದ ತಾಲೂಕಿನ ಮೊರಬ ಗ್ರಾಮದ ರೈತ ಪ್ರಕಾಶ್ ಅರ್ಜುನಪ್ಪ ತಳವಾರ ಮೂರು ಎಕರೆ ಜಮೀನಿನಲ್ಲಿ ಭರ್ಜರಿ ಪ್ರಗತಿಯಲ್ಲಿದೆ.

ತೋಟಗಾರಿಕೆ ಬೆಳೆಗೆ ಸಹಕಾರಿ, ಮಳೆ ಅಭಾವದ ನಡುವೆಯೂ ಬೆಳೆಗೆ ಉಪಕಾರಿಯಾದ ಪರ್ಯಾಯ ಬೆಳೆಗೆ ಸದುಪಯೋಗದ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಾಣಕ್ಕೆ ರೈತ ಪ್ರಕಾಶ್ ತಳವಾರ ಮನಸ್ಸು ಮಾಡಿದ್ದು ಕೃಷಿಹೊಂಡ ನಿರ್ಮಾಣದ ಕಾರ್ಯದ ಬಗ್ಗೆ ಅವರ ಅಭಿಪ್ರಾಯ ಏನಿದೆ ಕೇಳೋಣ.

ಒಟ್ಟಿನಲ್ಲಿ ಕೃಷಿ ಚಟುವಟಿಕೆ ಆರಂಭಕ್ಕೂ ಮೊದಲೇ ಅದೆಷ್ಟೋ ರೈತರು ಕೃಷಿಹೊಂಡ ನಿರ್ಮಾಣಕ್ಕೆ ಉತ್ಸಾಹ ತೋರಿದ್ದು, ಕೃಷಿ ಬದುಕಿಗೆ ವರದಾನವಾಗಿ ಲಕ್ಷ ಲಕ್ಷ ಆದಾಯ ತಂದುಕೊಡುವ ಕೃಷಿಹೊಂಡ ರೈತರಿಗೆ ಸಂಜೀವಿನಿಯಾಗಿದ್ದು, ದೇಶಪಾಂಡೆ ಫೌಂಡೇಶನ್'ಗೆ ಅನ್ನದಾತನ ಶುಭಾಶಯದ ಸುರಿಮಳೆ ತಲುಪುತ್ತಿದೆ.

Edited By : Nagesh Gaonkar
PublicNext

PublicNext

19/04/2022 05:16 pm

Cinque Terre

174.71 K

Cinque Terre

1

ಸಂಬಂಧಿತ ಸುದ್ದಿ