ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೈನುಗಾರಿಕೆಯಲ್ಲಿ ಉತ್ಸಾಹಿ ಯುವಕನ ಸಾಧನೆ : ಲಕ್ಷ ಲಕ್ಷ ಸಂಪಾದನೆ

ಕೊಡಗು : ಒಬ್ಬರ ಕೈ ಕೆಳಗೆ ಸಂಬಳಕ್ಕಾಗಿ ದುಡಿಯುತ್ತಿದ್ದ ಯುವಕನೋರ್ವ ಇದೀಗ ಹೈನುಗಾರಿಕೆ ಮಾಡುತ್ತ ಉತ್ತಮ ಜೀವನ ನಡೆಸುತ್ತ ಇತರರಿಗೆ ಮಾದರಿಯಾಗಿದ್ದಾನೆ.

ಹೌದು ಬೆಂಗಳೂರಿನ ಕಾರ್ಖಾನೆಗಳಲ್ಲಿ ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದ ಮಂಜುನಾಥ್ ಈಗ ಹೈನುಗಾರಿಕೆಯಲ್ಲಿ ಯಶಸ್ಸು ಕಂಡು ಲಾಭಾ ಗಳಿಸುತ್ತಿದ್ದಾರೆ.

ತಿಂಗಳಿಗೆ ಲಕ್ಷ ಸಂಪಾದನೆ ಮಾಡುವ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ.

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಮಂಜುನಾಥ್ ಏಳನೇ ತರಗತಿ ಮುಗಿಸಿ ಬಳಿಕ ಕೆಲಸ ಅರಸಿ ಬೆಂಗಳೂರು ಸೇರಿ ಹಲವು ವರ್ಷಗಳ ಕಾಲ ಅಲ್ಲಿಯೇ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದರು.

ಆದರೆ ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿನ ದುಡಿಮೆ ಸಾಕೆಂದು ಸ್ವಗ್ರಾಮಕ್ಕೆ ಹಿಂದಿರುಗಿದ ಮಂಜುನಾಥ್ ಬ್ಯಾಂಕುಗಳಲ್ಲಿ ಸಾಲ ಮಾಡಿ ಹೈನುಗಾರಿಕೆ ಆರಂಭಿಸಿ ಅದರಲ್ಲಿ ಯಶಸ್ಸು ಕಂಡಿದ್ದಾರೆ.

ಕಷ್ಟಪಟ್ಟು ದುಡಿಯುತ್ತಿರುವ ಉತ್ಸಾಹಿ ಯುವಕ ಹೈನುಗಾರಿಕೆ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿ ಇತರರಿಗೂ ಮಾದರಿಯಾಗಿದ್ದಾರೆ.

ಜರ್ಸಿ, ಹೆಚ್ ಎಫ್ ದೇಶಿ ತಳಿ ಹಸುಗಳ ಫಾರ್ಮ್ ನಡೆಸುತ್ತಿದ್ದಾರೆ. ಕರುಗಳು ಸೇರಿದಂತೆ 20 ಕ್ಕೂ ಹೆಚ್ಚು ಗುಣಮಟ್ಟದ ಹಸುಗಳನ್ನು ಪೋಷಿಸುತ್ತಿರುವ ಮಂಜುನಾಥ್ ಪ್ರತಿನಿತ್ಯ 80 ಲೀಟರ್ ಹಾಲು ಕರೆಯುತ್ತಾರೆ.

ತಿಂಗಳಿಗೆ 1 ಲಕ್ಷ ಕ್ಕೂ ಅಧಿಕ ಆದಾಯ ಸಂಪಾದಿಸುತ್ತಾರೆ.

ಹಸುಗಳ ಆಹಾರ, ವಿದ್ಯುತ್ ಬಿಲ್ ಎಲ್ಲಾ ನಿರ್ವಹಣೆ ವೆಚ್ಚಗಳನ್ನು ಕಳೆದು ತಿಂಗಳಿಗೆ ಕನಿಷ್ಠ 30 ಸಾವಿರ ಆದಾಯ ಗಳಿಸುತ್ತಿದ್ದಾರೆ.

Edited By : Nirmala Aralikatti
PublicNext

PublicNext

02/12/2020 06:55 pm

Cinque Terre

52.59 K

Cinque Terre

2

ಸಂಬಂಧಿತ ಸುದ್ದಿ