ಅಂಗವಿಕಲತೆಯನ್ನ ಮುಂದಿಟ್ಟು ಕೆಲವರು ಸಿಂಪತಿ ಕ್ರಿಯೇಟ್ ಮಾಡುತ್ತಾರೆ. ಈ ಮೂಲಕ ಭಿಕ್ಷಾಟನೆಯ ಕಡೆಗೆ ಕೈ ಚಾಚುತ್ತಾರೆ. ಆದರೆ ಕೆಲವರಂತೂ ಎಲ್ಲವನ್ನೂ ಮೆಟ್ಟಿನಿಂತು ಸಾಧನೆ ಮಾಡುತ್ತಾರೆ. ಸ್ವಾವಲಂಬಿ ಜೀವನಕ್ಕೆ ಸಾಕ್ಷಿ ಎಂಬದನ್ನು ಸಾರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರೈತರು ನಮ್ಮ ದೇಶದ ಬೆನ್ನೆಲುಬು. ರೈತರಿಲ್ಲದೆ ಯಾರ ಬದುಕೂ ಇಲ್ಲ. ಇದು ಕೂಡ ಅಂತಹದ್ದೇ ಒಬ್ಬರು ಮಾದರಿ ರೈತರ ವಿಡಿಯೋ. ವಿಕಲಚೇತನರಾದ ಈ ರೈತ ಹೊಲದಲ್ಲಿ ದುಡಿಯುವ ಈ ದೃಶ್ಯ ಎಲ್ಲರ ಬದುಕಿಗೂ ಒಂದು ಪಾಠದಂತಿದೆ.
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದಾಗಲೇ ಈ ಅನ್ನದಾತರೆಷ್ಟು ಶ್ರಮವಹಿಸಿ ದುಡಿಯುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಅಂಗವಿಕಲತೆ ಮೆಟ್ಟಿ ನಿಂತು ಇವರು ಗದ್ದೆಯಲ್ಲಿ ಬೆವರು ಸುರಿಸಿ ದುಡಿಯುವ ದೃಶ್ಯಗಳು ನೆಟ್ಟಿಗರ ಮನ ಗೆದ್ದಿದೆ.
PublicNext
17/11/2020 02:46 pm