ನ್ಯೂಯಾರ್ಕ್: ಅದೃಷ್ಟ ಇದ್ದವರು ಸಾವಿನ ಮನೆಯ ಕದ ತಟ್ಟಿ ವಾಪಸ್ ಬರ್ತಾರೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ.
ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ನಡೆದ ಘಟನೆ ಇದು. ಬೃಹತ್ ಅಪಾರ್ಟ್‌ಮೆಂಟ್ ಒಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಹದಿವಯಸ್ಸಿನ ಮಕ್ಕಳು ಕಿಟಕಿಯಿಂದ ಹೊರಬರಲು ಯತ್ನಿಸಿದ್ದಾರೆ. ಕಿಟಕಿ ಹಿಡಿದು ಜೋತು ಬಿದ್ದ ಅವರಿಗೆ ಆಪತ್ಬಾಂಧವನಂತೆ ಕಟ್ಟದ ಪೈಪ್ ಆಸರೆಯಾಗಿ ಸಿಕ್ಕಿದೆ. ಪೈಪ್ ಹಿಡಿದ ಇಬ್ಬರೂ ಮಕ್ಕಳು ಅದರಿಂದಲೇ ಕೆಳಗಿಳಿದು ಬಂದಿದ್ದಾರೆ. ಈ ಗ್ರೇಟ್ ಎಸ್ಕೇಪ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
PublicNext
20/12/2021 09:56 pm