ಚೆನ್ನೈ: ಭಾರತದ ಮುಖ್ಯ ಸೇನಾಧಿಕಾರಿ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಮಿಲಿಟರಿ ಹೆಲಿಕಾಪ್ಟರ್ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಪತನಗೊಂಡಿದೆ.ಈ ದುರಂತದಲ್ಲಿ 13 ಜನ ಮೃತಪಟ್ಟಿರೋದು ವರದಿ ಆಗಿದೆ.ಚಿಕಿತ್ಸೆ ಫಲಿಸದೇ ಮುಖ್ಯ ಸೇನಾಧಿಕಾರಿ ಬಿಪಿನ್ ರಾವತ್ ನಿಧನ ಹೊಂದಿದ್ದಾರೆ. ಮುಖ್ಯ ಸೇನಾಧಿಕಾರಿ ಬಿಪಿನ್ ನಮ್ಮ ದೇಶಕ್ಕೆ ಎಷ್ಟು ಮುಖ್ಯ ಆಗಿದ್ದರು. ಅವರ ಬಗ್ಗೆ ಇಲ್ಲೊಂದಿಷ್ಟು ಮಾಹಿತಿ ಇದೆ. ಬನ್ನಿ, ನೋಡೋಣ.
ಮುಖ್ಯ ಸೇನಾಧಿಕಾರಿ ಬಿಪಿನ್ ರಾವತ್ ಭಾರತಕ್ಕೆ ಬಹು ಮುಖ್ಯವಾದ ವ್ಯಕ್ತಿ. ಭಾರತದ ರಕ್ಷಣಾ ಸಚಿವರಿಗೆ ಇವರೇ ಪ್ರಧಾನ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ರಾವತ್ ಅವರ ಪಾತ್ರ ಮತ್ತು ಜವಾಬ್ದಾರಿ ದೊಡ್ಡಮಟ್ಟದಲ್ಲಿಯೇ ಇದೆ.
ಸೈಬರ್ ಮತ್ತು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಟ್ರೈ-ಸೇವೆಗಳ ಏಜೆನ್ಸಿಗಳು/ಸಂಸ್ಥೆಗಳು/ಆಜ್ಞೆಗಳು ಬಿಪಿನ್ ರಾವತ್ ಅವರ ಅಧೀನದಲ್ಲಿಯೇ ಇವೆ. ಪ್ರಧಾನ ಮಂತ್ರಿ ನೇತೃತ್ವದ ಪರಮಾಣು ಕಮಾಂಡ್ ಪ್ರಾಧಿಕಾರದ ಸದಸ್ಯರು ಆಗಿದ್ದಾರೆ. CDS ಆಗಿ ಜನರಲ್ ರಾವತ್ ಅವರು ಚೀಪ್ಸ್ ಆಫ್ ಸ್ಟಾಫ್ ಕಮೀಟಿಯ ಖಾಯಂ ಅಧ್ಯಕ್ಷರು ಆಗಿದ್ದಾರೆ.
PublicNext
08/12/2021 06:41 pm