ಶಿವಮೊಗ್ಗ: ಮಂಡಗದ್ದೆ ಕಾಡಿನ ಕರ್ವ್ ನಲ್ಲಿ ಸ್ಪೀಡಾಗಿ ಬಂದು ಚರಂಡಿಗೆ ಬಿದ್ದಿದ್ದ ಇಬ್ಬರು ಬೈಕ್ ಸವಾರರನ್ನ ರಕ್ಷಿಸಿ ಆಸ್ಪತ್ರೆಗೆ ಕಳಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಗೃಹ ಸಚಿವ ಆರಗ ಜ್ಞಾನೇಂದ್ರ.
ಇಲ್ಲಿಯ ಮಂಡಗದ್ದೆ ಕಾಡಿನಲ್ಲಿ ಬೈಕ್ ಅಪಘಾತವಾಗಿ ಇಬ್ಬರು ರಸ್ತೆ ಪಕ್ಕದ ಗುಂಡಿಗೆ ಬಿದ್ದಿದ್ದರು. ಶಿವಮೊಗ್ಗಕ್ಕೆ ಇದೇ ದಾರಿಯಿಂದಲೇ ಬರುತ್ತಿದ್ದ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಇವರನ್ನ ಕಂಡ ಕೂಡಲೇ ಕಾರಿನಿಂದ ಇಳಿದು, ನೀರು ಕುಡಿಸಿ ಗಾಯಾಳುಗಳನ್ನ ರಕ್ಷಿಸೋ ಕೆಲಸವನ್ನ ಮಾಡಿದ್ದಾರೆ.
ತಮ್ಮ ಎಸ್ಕಾರ್ಟ್ ವಾಹನದಲ್ಲಿಯೇ ಗಾಯಗೊಂಡವರನ್ನು ಸಮೀಪದ ಮೆಗ್ಗಾನ್ ಆಸ್ಪತ್ರೆಗೂ ಕಳಿಸಿಕೊಟ್ಟಿದ್ದಾರೆ.
PublicNext
13/11/2021 06:04 pm