ದಾವಣಗೆರೆ: ರಸ್ತೆ ಅಪಘಾತ ಸಂಭವಿಸಿ ಸಾವು ಬದುಕಿನ ಮಧ್ಯ ಯುವಕನ ಹೋರಾಟ ನಡೆಸಿದ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಮದಕರಿ ಕ್ಯಾಂಪ್ ಬಳಿ ಘಟನೆ
ಒಂದೂವರೆ ಗಂಟೆ ರಸ್ತೆಯಲ್ಲಿ ಬಿದ್ದು ಯುವಕ ಒದ್ದಾಡಿದ್ದಾನೆ. ಶ್ರೀನಿವಾಸ್ ಬಳ್ಳಾರಿ ಗಾಯಗೊಂಡಿರುವ ಯುವಕ. ಬೈಕ್‌ನಲ್ಲಿ ಬರುವಾಗ ಅಪಘಾತವಾಗಿ ಒಂದೂವರೆ ಗಂಟೆ ಕಳೆದರೂ ಸ್ಥಳಕ್ಕೆ ಆಂಬುಲೆನ್ಸ್ ಬಂದಿಲ್ಲ. ಯುವಕನನ್ನು ಉಳಿಸಲು ಸಾರ್ವಜನಿಕರು ಹರಸಾಹಸಪಟ್ಟರು.
ಆಂಬುಲೆನ್ಸ್ ನವರಿಗೆ ಫೋನ್ ಮಾಡಿದರೂ ಸಹ ಬಾರದಿದ್ದಕ್ಕೆ ಜನರು ಆಕ್ರೋಶಗೊಂಡರು. ಯುವಕನನ್ನು ಟಾಟಾ ಏಸ್ ನಲ್ಲಿ ಹಾಕಿ ಕಳುಹಿಸಿದರು. ಗಾಯಾಳು ಯುವಕನನ್ನು ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ದಾವಣಗೆರೆಯಿಂದ ಹರಪನಹಳ್ಳಿ ಕಡೆಗೆ ಯುವಕ ಹೋಗುವಾಗ ಈ ಘಟನೆ ಸಂಭವಿಸಿದೆ.
PublicNext
26/02/2021 08:33 pm