ಚಲಿಸುತ್ತಿರುವ ರೈಲು ಹತ್ತಲೂ ಬೇಡ, ಇಳೀಲೂ ಬೇಡ ಅಂತ ಅದೆಷ್ಟೇ ಹೇಳಿದರೂ ಕೆಲವರು ರಿಸ್ಕ್ ತಗೋತಾನೇ ಇರ್ತಾರೆ. ಅಂತವರಿಗಾಗಿ ಈ ವಿಡಿಯೋ. ಚಲಿಸುತ್ತಿರುವ ರೈಲಿನಲ್ಲಿ ಲಗೇಜ್ ಹಾಕಿದ ಆಕೆ ಪಟಕ್ಕನೇ ಹತ್ತಲು ಹೋಗಿದ್ದಾಳೆ. ಆಗ ಕಾಲಿಗೆ ಏನೋ ತಾಕಿದ ಪರಿಣಾಮ ಸ್ಥಳದಲ್ಲೇ ಮುಗ್ಗರಿಸಿ ಬಿದ್ದಿದ್ದಾಳೆ.
ಕ್ಷಣಾರ್ಧದಲ್ಲಿ ಆಕೆಯನ್ನ ರೈಲು ಸ್ವಲ್ಪ ಮುಂದೆ ಎಳೆದು ಒಯ್ದಿದೆ. ಇದನ್ನೆಲ್ಲ ನೋಡಿ ಅಲ್ಲಿ ಧಾವಿಸಿದ ರೈಲ್ವೇ ಪೊಲೀಸರು ಹಾಗೂ ಸ್ಥಳೀಯರು ಯುವತಿಯನ್ನು ರಕ್ಷಿಸಿದ್ದಾರೆ. ಅದಕ್ಕೆ ಹೇಳೋದು ರಿಸ್ಕ್ ತಗೋಬಾರದು ಅಂತ ಅಲ್ವಾ?
PublicNext
23/02/2021 08:35 pm