ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊರನಾಡಲ್ಲೊಂದು ಕನ್ನಡ ಶಾಲೆ : ಮಕ್ಕಳಿಗೆ ಫೀಸ್ ಇಲ್ಲ, ಶಿಕ್ಷಕರಿಗೆ ಸಂಬಳವೂ ಇಲ್ಲ..!

ಮೈಸೂರು: ರಾಜ್ಯದಲ್ಲಿ ಕನ್ನಡ,ಕನ್ನಡ ಶಾಲೆ ಎಂದ್ರೆ ಮೂಗು ಮುರಿಯುವವರೇ ಹೆಚ್ಚು ಆದ್ರೆ ದೂರದ ದುಬೈನಲ್ಲಿ ಕನ್ನಡ ಶಾಲೆಯೊಂದನ್ನು ತೆರೆದು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.

ಹೌದು, ದುಬೈನಲ್ಲಿರುವ ಕನ್ನಡದ ಅತಿದೊಡ್ಡ ಹೊರನಾಡು ಕನ್ನಡಿಗರ ಶಾಲೆ. ಅಲ್ಲಿ ವಿದ್ಯಾರ್ಥಿಗಳಿಗೆ ಫೀಸ್ ಇಲ್ಲ, ಶಿಕ್ಷಕರಿಗೆ ಸಂಬಳವೂ ಇಲ್ಲ.

ದುಬೈನಲ್ಲಿ ಈ ಅಪರೂಪದ ಕೈಂಕರ್ಯ ನಡೆಸುತ್ತಿರುವವರು 'ಕನ್ನಡ ಮಿತ್ರರು' ಸಂಘಟನೆ.

2014ರಲ್ಲಿ 40 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶಾಲೆಗೆ ಈ ವರ್ಷ ಬರೋಬ್ಬರಿ 303 ವಿದ್ಯಾರ್ಥಿಗಳ ಪ್ರವೇಶ ಪಡೆದಿದ್ದಾರೆ.

ಕನ್ನಡದ ಮಕ್ಕಳು ದಾಖಲೆ ಪ್ರಮಾಣದಲ್ಲಿ ಪ್ರವೇಶಾತಿ ಬಯಸಿದ್ದಾರೆ. ಈ ಶಾಲೆ ವಾರಾಂತ್ಯದಲ್ಲಿ(ಶುಕ್ರವಾರ) ನಡೆಯುತ್ತಿದೆ.

ಕೆಲಸ ಅರಸಿ ಯುಎಇನಲ್ಲಿ ನೆಲೆಸಿರುವ ಕುಟುಂಬಸ್ಥರ ಮಕ್ಕಳೇ ಈ ಶಾಲೆಯ ವಿದ್ಯಾರ್ಥಿಗಳು.

ಅವರ ಪೋಷಕರೇ ಶಿಕ್ಷಕರು. ವರ್ಣಮಾಲೆಯಿಂದ ಪ್ರೌಢ ಶಿಕ್ಷಣದವರೆಗೂ ಇಲ್ಲಿ ಕಲಿಸಲಾಗುತ್ತದೆ.

Edited By : Nirmala Aralikatti
PublicNext

PublicNext

01/11/2020 11:14 am

Cinque Terre

69.05 K

Cinque Terre

3

ಸಂಬಂಧಿತ ಸುದ್ದಿ