ಬೆಂಗಳೂರು: ದುಡಿದು ತಿಂದ್ರೆ ಯಾರದ್ದು ಏನು ಎನ್ನುವಂತೆ ಇಲ್ಲೊಬ್ಬ ವಯೋವೃದ್ಧ ಸುಡು ಬಿಸಿಲಿನಲ್ಲಿ ಕೊಡೆ ಹಿಡಿದು ಸಸಿ ಮಾರುವ ದೃಶ್ಯ ಸದ್ಯ ಭಾರಿ ಮುನ್ನಲೆಗೆ ಬಂದಿದೆ.
ಹೌದು ಬೆಂಗಳೂರಿನ ಜೆಪಿ ನಗರದ ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಸಸಿ ಮಾರುವ ರೇವಣಸಿದ್ದಪ್ಪ ಅವರಿಗೆ ಸಹಾಯ ಮಾಡಿ ಎನ್ನುವ ಟ್ವೀಟ್ ವೈರಲ್ ಆಗಿದೆ.
ಸದ್ಯ ಈ ಟ್ವೀಟ್ ಗೆ ಬಾಲಿವುಡ್ ನಟರು ಪ್ರತಿಕ್ರಿಯಿಸಿದ್ದು, ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ರೇವಣಸಿದ್ದಪ್ಪ ಅವರು ಸಿಗ್ನಲ್ ಪಕ್ಕ ಕುಳಿತುಕೊಂಡು 10 ರಿಂದ 30 ರೂಪಾಯಿಗೆ ಸಸಿ ಮಾರುತ್ತಿದ್ದಾರೆ.
ಈ ವೃದ್ಧನ ಬಗ್ಗೆ ಐ ಆಮ್ ಶುಭಮ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಇವರಿಗೆ ಸಹಾಯ ಮಾಡಿ ಎಂದು ನಟರಾದ ಸೋನು ಸೂದ್, ಮಾಧವನ್, ಕಾಂಚನಾ ಗುಪ್ತ ಮತ್ತು ಪ್ರವೀಣ್ ಕಸ್ವನ್ ಗೆ ಟ್ಯಾಗ್ ಮಾಡಲಾಗಿದೆ.
ಇದನ್ನು ಕಂಡ ಹಲವರು ರೀಟ್ವೀಟ್ ಮಾಡಿದ್ದು, ಪೋಸ್ಟ್ ವೈರಲ್ ಆಗಿದೆ.
ಪೋಸ್ಟ್ ನೋಡಿದ ಬಾಲಿವುಡ್ ನಟ ರಣದೀಪ್ ಹೂಡಾ, ಹೇ ಬೆಂಗಳೂರು ಸ್ವಲ್ಪ ಪ್ರೀತಿಯನ್ನು ತೋರಿಸುವುದನ್ನು ಮಾಡಿ, ಇವರು ವುಲಾರ್ ಫ್ಯಾಷನ್ ಫ್ಯಾಕ್ಟರಿ, ಜೆಪಿ ನಗರ, ಸಾರಕ್ಕಿ ಸಿಗ್ನಲ್, ಕನಕಪುರ ರಸ್ತೆ, ಬೆಂಗಳೂರು.
ಈ ವಿಳಾಸದಲ್ಲಿ ಕುಳಿತಿರುತ್ತಾರೆ ಎಂದು ಮನವಿ ಮಾಡಿದ್ದಾರೆ.
ಮೊದಲು ಈ ವೃದ್ಧನನ್ನು ಕಂಡ ಸೈನಿಕರೊಬ್ಬರು ಟ್ವೀಟ್ ಮಾಡಿ, ಬಾಲಿವುಡ್ ನಟರಿಗೆ ಟ್ಯಾಗ್ ಮಾಡಿದ್ದಾರೆ. ವೃದ್ಧನಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
PublicNext
26/10/2020 06:05 pm