ವಾಷಿಂಗ್ಟನ್: ಅಪರೂಪದ ಎರಡು ತಲೆಯ ದಕ್ಷಿಣ ಕಪ್ಪು ರೇಸರ್ ಹಾವು ಅಮೆರಿಕದ ಮಹಿಳೆಯೊಬ್ಬರ ಮನೆಯಲ್ಲಿ ಪತ್ತೆಯಾಗಿದೆ.
ಮಹಿಳೆಯ ಮನೆಯಲ್ಲಿ ಅಡಗಿದ್ದ ಹಾವನ್ನು ಬೆಕ್ಕು ಒಳಗೆ ಎಳೆದಿತ್ತು. ಇದನ್ನು ಕಂಡು ಮಹಿಳೆ ಬೆಚ್ಚಿಬಿದ್ದರು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸಹಾಯದಿಂದ ಹಿಡಿದು ರಕ್ಷಿಸಲಾಗಿದೆ.
'ಎರಡು ತಲೆಯ ಹಾವುಗಳು ಅರಣ್ಯದಲ್ಲಿ ಬದುಕುಳಿಯುವ ಸಾಧ್ಯತೆಯಿಲ್ಲ. ಏಕೆಂದರೆ ಎರಡು ಮಿದುಳುಗಳು ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ. ಹೀಗಾಗಿ ಪರಭಕ್ಷಕಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ' ಎಂದು ಅಮೆರಿಕದ ಎಫ್‌ಡಬ್ಲ್ಯೂಸಿ ಮೀನು ಮತ್ತು ವನ್ಯಜೀವಿ ಸಂಶೋಧನಾ ಸಂಸ್ಥೆ ತಿಳಿಸಿದೆ.
PublicNext
23/10/2020 06:49 pm