ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಯುವತಿಗೆ ಒದೆ ಕೊಟ್ಟ ಜಿಂಕೆ

ಲಂಡನ್: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡ ಬಗ್ಗೆ ಕೇಳಿದ್ದೇವೆ, ನೋಡಿದ್ದೇವೆ. ಇಂತಹದ್ದೇ ಘಟನೆಯೊಂದು ಲಂಡನ್‌ನಲ್ಲಿ ನಡೆದಿದೆ.

ಲಂಡನ್‌ನ ರಿಚ್ಮಂಡ್ ಪಾರ್ಕ್ ನಲ್ಲಿ ಯುವತಿಯೊಬ್ಬಳು ಜಿಂಕೆ ಸಮೀಪಕ್ಕೆ ಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಳು. ಈ ವೇಳೆ ಕೋಪಗೊಂಡ ಜಿಂಕೆ ಯುವತಿಯ ಮೇಲೆ ದಾಳಿ ನಡೆಸಿದೆ. ತಕ್ಷಣವೇ ಓಡಲು ಆರಂಭಿಸಿದ ಯುವತಿಯನ್ನು ಬೆನ್ನಟ್ಟಿದ ಜಿಂಕೆ ಮುಂಗಾಲು ಎತ್ತಿ ಒದೆ ಕೊಟ್ಟಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಯಲ್ ಪಾರ್ಕ್ ಪೊಲೀಸರು, 'ಇದು ಅಕ್ಟೋಬರ್ 11ರಂದು ರಿಚ್ಮಂಡ್ ಪಾರ್ಕ್ ನಲ್ಲಿ ಘಟನೆ ನಟಡೆದಿದೆ. ನಾವೇಕೆ ಪ್ರಾಣಿಗಳಿಂದ 50 ಮೀಟರ್ ದೂರ ಇರಿ ಎಂದು ಹೇಳುತ್ತೇವೆ ಎನ್ನುವುದನ್ನು ಈ ಫೋಟೋ ಎಚ್ಚರಿಸುತ್ತದೆ' ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

16/10/2020 05:30 pm

Cinque Terre

31.65 K

Cinque Terre

1

ಸಂಬಂಧಿತ ಸುದ್ದಿ