ಯಾದಗಿರಿ: ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನವಜಾತ ಶಿಶುವನ್ನು ತೆಪ್ಪ ನಡೆಸುತ್ತಿದ್ದ ಯುವಕರು ರಕ್ಷಿಸಿದ ಘಟನೆ ಶಹಪುರ ತಾಲೂಕಿನ ರೋಜಾ ಗ್ರಾಮದ ಬಳಿ ನಡೆದಿದೆ.
ಭೀಮಾ ನದಿ ಹಿನ್ನೀರು ಗ್ರಾಮ ನಡುಗಡ್ಡೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೋಟ್ ಮೂಲಕ ಸಂಚಾರ ಮಾಡುತ್ತಿದ್ದರು. ರಜಿಯಾ ಬೇಗಂ ಅವರು ಕೂಡ ತಮ್ಮ ಪುಟ್ಟ ಮಗುವಿನೊಂದಿಗೆ ತೆಪ್ಪದಲ್ಲಿ ತಮ್ಮ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಏಕಾಏಕಿ ತೆಪ್ಪ ಅಲುಗಾಡಿ ಮಗು ರಜಿಯಾ ಅವರ ಕೈಯಿಂದ ಜಾರಿ ಬಿದ್ದು, ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು.
ಮಗು ನೀರಿಗೆ ಬಿದ್ದಿರುವುದು ಗಮನಕ್ಕೆ ಬರುತ್ತಿದ್ದಂತೆ ತೆಪ್ಪ ನಡೆಸುವವರು ಮಗುವನ್ನು ರಕ್ಷಣೆ ಮಾಡಿ ತಾಯಿಯ ಮಡಿಲಿಗೆ ಒಪ್ಪಿಸಿದ್ದಾರೆ. ಮಗುವನ್ನು ರಕ್ಷಣೆ ಮಾಡಿದ ಯುವಕರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
PublicNext
15/10/2020 07:36 pm