ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಜಾತ ಶಿಶುವನ್ನು ಹಿಡಿದುಕೊಂಡು ಕೆಲಸಕ್ಕೆ ಹಾಜರಾದ ಐಎಎಸ್ ಅಧಿಕಾರಿ: ವಿಡಿಯೋ ವೈರಲ್

ಲಕ್ನೋ: ಐಎಎಸ್ ಮಹಿಳಾ ಅಧಿಕಾರಿಯೊಬ್ಬರು ತಮ್ಮ ಮೂರು ವಾರದ ಮಗುವಿನೊಂದಿಗೆ ಕೆಲಸಕ್ಕೆ ಹಾಜರಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮೋಡಿನಗರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಗಿರುವ ಐಎಎಸ್ ಅಧಿಕಾರಿ ಸೌಮ್ಯಾ ಪಾಂಡೆ 22 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳದೆ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಚೇರಿಯಲ್ಲಿ ತಮ್ಮ ಕೆಲಸದ ಜೊತೆಗೆ ತಾಯಿಯ ಕರ್ತವ್ಯವನ್ನೂ ಸಹ ನಿಬಾಯಿಸುತ್ತಿದ್ದಾರೆ. ಕೆಲಸದ ಬಗೆಗಿನ ಅವರ ನಿಷ್ಠೆಯನ್ನು ನೋಡಿ ನೆಟ್ಟಿಗರು ಅವರನ್ನು ಹೊಗಳಿದ್ದಾರೆ.

Edited By : Vijay Kumar
PublicNext

PublicNext

13/10/2020 08:07 am

Cinque Terre

117.39 K

Cinque Terre

9