ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅ.13 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಧಾರವಾಡ: ಸವದತ್ತಿಯಿಂದ ಅಮ್ಮಿನಬಾವಿಯವರೆಗೆ ಧಾರವಾಡ ಹಾಗೂ ಹುಬ್ಬಳ್ಳಿ ನಗರಕ್ಕೆ ನೀರು ಸರಬರಾಜು ಮಾಡುವ 965 ಮಿ. ಮೀ. ವ್ಯಾಸದ ಎಂ.ಎಸ್. ಕಚ್ಚಾ ನೀರು ಕೊಳವೆ ಮಾರ್ಗದಲ್ಲಿ ಹಾಗೂ ಚೈನೇಜ್ 22540 ಏರವಾಲ್ವ್ ಚೇಂಬರ್ ಎವಿ-38 ನಲ್ಲಿ ನೀರು ಸೋರುವಿಕೆ ಕಂಡು ಬಂದಿರುವುದರಿಂದ ಅಕ್ಟೋಬರ್ 13 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ.

ಆದ್ದರಿಂದ ಧಾರವಾಡ ನಗರದ ಎಲ್ಲ ಬಡಾವಣೆಗಳಿಗೆ ಹಾಗೂ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಪ್ರಕಟಣೆ ತಿಳಿಸಿದೆ.

Edited By : Abhishek Kamoji
Kshetra Samachara

Kshetra Samachara

12/10/2022 08:24 pm

Cinque Terre

16.96 K

Cinque Terre

0