ಧಾರವಾಡ: ಧಾರವಾಡ ಗ್ರಾಮೀಣ ಉಪವಿಭಾಗ ವ್ಯಾಪಿಯಲ್ಲಿ ಬರುವ 110/33/11 ಕೆ.ವಿ.ಬೇಲೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ಕೆಲಸ ನಡೆಯುತ್ತಿರುವುದರಿಂದ ಸೆ.11 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
33 ಕೆವಿ ಮಾರ್ಗಗಳಾದ ಯು.ಎ.ಎಸ್., ಗೋವಾ ಮಿಲ್ಲರ್ಸ3, ಟಾಟಾ 1 ಮತ್ತು 2, ಯು.ಡಿ.ಎಲ್., ಸದರ್ಸ ಬೇರೊ, 11 ಕೆವಿ ಮಾರ್ಗಗಳಾದ ತೇಗೂರ ಇಂಡಸ್ಟ್ರೀಯಲ್, ಪ್ರಜಾವಾಣಿ, ಗಣೇಶ ಅನುಗ್ರಹ, ಟನಾ, ಮಾಡೇಲ್ ಬಕೆಟ್, ಹೈಕೋರ್ಟ್, ಐಐಟಿ, ಟೇಲಿಕೊ, ತಡಕೋಡ, ಗರಗ, ಮಾದನಭಾವಿ, ಮಂಡಿಹಾಳ, ಹೊಸೆಟ್ಟಿ, ದುರ್ಗದ ಕೇರಿ ಮತ್ತು ಬೋಗೂರು ಈ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
Kshetra Samachara
09/09/2022 01:03 pm