ನವಲಗುಂದ : ನವಲಗುಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ದಿನಾಂಕ 22/08/2022 ಸೋಮವಾರ ಮತ್ತು 23/08/2022 ಮಂಗಳವಾರದಂದು ಎರಡು ದಿನಗಳು ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆ.ವಿ. ಮಾರ್ಗಗಳಲ್ಲಿ ಹೆಚ್.ಟಿ / ಎಲ್.ಟಿ ಲೈನ್ ಹಾಗೂ ಪರಿವರ್ತಕಗಳ ನಿರ್ವಹಣೆಯನ್ನು ಕೈಗೊಳ್ಳುವುದರಿಂದ ಎರಡು ದಿನಗಳ ಕಾಲ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನವಲಗುಂದ ಸೇರಿದಂತೆ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
22/08/2022 ಸೋಮವಾರದಂದು ನವಲಗುಂದ ಪಟ್ಟಣ ಸೇರಿದಂತೆ ಶಾನವಾಡ, ಹಾಲಕುಸುಗಲ್, ಅಳಗವಾಡಿ, ಗೊಬ್ಬರಗುಂಪಿ, ಹೆಬ್ಬಾಳ, ಬಳ್ಳೂರು, ಜಾವುರ, ಹಣಸಿ, ಶಿರಕೋಳ ಹಾಗೂ ಅಣ್ಣಿಗೇರಿ ಪಟ್ಟಣ ಸೇರಿದಂತೆ ಮಜ್ಜಿಗುಡ್ಡ, ಸೈದಾಪುರ, ಕೊಂಡಿಕೊಪ್ಪ, ಸಾಸ್ವಿಹಳ್ಳಿ, ಹಳ್ಳಿಕೇರಿ, ಅಡ್ನೂರ, ಕಿತ್ತೂರ, ನಾವಳ್ಳಿ, ತುಪ್ಪದಕುರಹಟ್ಟಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಾಯ ಆಗಲಿದೆ.
23/08/2022 ಮಂಗಳವಾರದಂದು ಇಬ್ರಾಹಿಂಪುರ, ಶಲವಡಿ, ಖನ್ನೂರ, ಭೋಗನೂರ, ನಾಯಕನೂರ, ದಾಟನಾಳ, ಮೊರಬ, ಚಿಲಕವಾಡ, ಬೆಳಹಾರ, ನಾಗರಹಳ್ಳಿ, ಬಲ್ಲರವಾಡ, ಕುಮಾರಗೋಪ್ಪ, ಯಮನೂರ, ಪಡೆಸೂರ, ಆರೆಕುರಹಟ್ಟಿ, ಕರ್ಲವಾಡ, ಕಾಲವಾಡ, ತಿರ್ಲಾಪುರ, ಮೊರಬ, ತಲೆ ಮೊರಬ, ಗುಮ್ಮಗೋಳ, ಬ್ಯಾಲ್ಯಾಳ, ಆಯಟ್ಟಿ, ಶಿರೂರ, ಭದ್ರಾಪುರ, ನಲವಡಿ, ಮನಕವಾಡ, ಶಿಶ್ವಿನಹಳ್ಳಿ, ಮಜ್ಜಿಗುಡ್ಡ, ಸೈದಾಪುರ, ಕೊಂಡಿಕೊಪ್ಪ, ಸಾಸ್ವಿಹಳ್ಳಿ, ಹಳ್ಳಿಕೇರಿ, ಅಡ್ನೂರ, ಕಿತ್ತೂರ, ನಾವಳ್ಳಿ ತುಪ್ಪದ ಕುರಹಟ್ಟಿ, ಬಸಾಪುರ ಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
Kshetra Samachara
22/08/2022 11:12 am