ನವಲಗುಂದ : ಶುಕ್ರವಾರ ರಾತ್ರಿ ನವಲಗುಂದ ಭಾಗದಲ್ಲಿ ಸುರಿದ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಬೆಣ್ಣೆ ಹಳ್ಳ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ನವಲಗುಂದ ಯಮನೂರ ಚಾಂಗದೇವನ ದರ್ಶನಕ್ಕೆ ಬಂದಂತ ಭಕ್ತರು ಬೆಣ್ಣೆ ಹಳ್ಳ ಕ್ಕೆ ಆಗಮಿಸುವ ಸಾಧ್ಯತೆ ಇದೆ. ಈ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಬೆಣ್ಣೆ ಹಳ್ಳದ ಹರಿವು ಹೆಚ್ಚಿದ ಹಿನ್ನೆಲೆ ಅಕ್ಕಪಕ್ಕದ ಜಮೀನುಗಳು ಈಗಾಗಲೇ ಸಂಪೂರ್ಣ ಜಲಾವೃತಗೊಂಡಿವೆ. ಬೆಳಿಗ್ಗೆಯಿಂದ ಹಳ್ಳಕ್ಕೆ ಭಕ್ತರ ಆಗಮನ ಇಲ್ಲದಿದ್ದರೂ ಯಮನೂರ ಗ್ರಾಮ ಪಂಚಾಯತ್ ಸಿಬ್ಬಂದಿ ಸ್ಥಳದಲ್ಲಿರಬೇಕು ಎಂಬುದು ಸಾರ್ವಜನಿಕರ ಮಾತು. ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ.
Kshetra Samachara
01/10/2022 11:56 am