ನವಲಗುಂದ: ತಾಲ್ಲೂಕಿನ ಅಮರಗೋಳ ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಿಲುಕಿದ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರಿಂದ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಉಕ್ಕಿ ಹರಿದ ಹಳ್ಳದ ನೀರಿನಿಂದ ಶಾಲೆಯಲ್ಲೇ ಸಿಲುಕಿದ್ದ ಸುಮಾರು 150 ವಿದ್ಯಾರ್ಥಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಇನ್ನು ಹಳ್ಳದ ನೀರಿನ ಹರಿವು ಕಡಿಮೆಯಾದ ನಂತರ ಮಕ್ಕಳನ್ನು ಶಾಲೆಯಿಂದ ಸ್ಥಳಾಂತರ ಮಾಡಗುವುದು, ಈ ಹಿನ್ನೆಲೆ ನೀರಿನ ಹರಿವು ಕಡಿಮೆಯಾಗುವುದನ್ನು ಕಾಯಲಾಗುತ್ತಿದ್ದು, ಅಲ್ಲಿಯವರೆಗೆ ಮಕ್ಕಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
Kshetra Samachara
16/06/2022 07:56 pm