ನವಲಗುಂದ : ಗುರುವಾರ ಸಂಜೆ ನವಲಗುಂದ ಪಟ್ಟಣದಲ್ಲಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ಪಟ್ಟಣದ ಬಸವೇಶ್ವರ ನಗರದ ಪುರಸಭೆ ಜಾಗದಲ್ಲಿ ಹಾಕಿದ್ದ ತಗಡಿನ ಶೆಡ್ದುಗಳು ಗಾಳಿಗೆ ಹಾರಿ ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬ ಧರೆಗೆ ಉರುಳಿದೆ.
ತಗಡಿನ ಶೆಡ್ಡಿನ ಮೇಲೆ ಇಟ್ಟಂತ ಕಲ್ಲುಗಳು ಅಕ್ಕ ಪಕ್ಕದಲ್ಲಿರುವ ಮನೆಗಳ ಹಾಗೂ ಬೈಕಿನ ಮೇಲೆ ಬಿದ್ದಿವೆ ಎನ್ನಲಾಗಿದೆ. ಮತ್ತು ಓರ್ವ ಮಹಿಳೆಯ ತಲೆಗೆ ಕಲ್ಲು ತಾಕಿ ಕೊಂಚ ಗಾಯವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಯಾವುದೇ ಪ್ರಾಣಹಾನಿಯಾಗಿಲ್ಲ.
ಇನ್ನು ತಾಲೂಕಿನಾದ್ಯಂತ ಗಾಳಿ ಮಳೆಗೆ ರೈತರು ಜಾನುವಾರುಗಳಿಗೆ ಮೇವು ಸಂಗ್ರಹಣೆ ಹಾಗೂ ಹತ್ತಿ ಸೂರ್ಯಕಾಂತಿ ಇನ್ನಿತರ ಬೆಳೆಗಳು ಅಕಾಲಿಕ ಮಳೆಗೆ ಸಿಲುಕಿ ಹಾನಿಯಾಗಿವೆ. ಈ ಭಾಗದಲ್ಲಿ ಹಳೆಯ ಮಣ್ಣಿನ ಮನೆಗಳಿದ್ದು, ಸತತ ಸುರಿಯುತ್ತಿರುವ ಮಳೆಗೆ ಬೀಳುವ ಆತಂಕವನ್ನು ಎದುರಿಸುತ್ತಿವೆ ಎನ್ನಲಾಗಿದೆ.
Kshetra Samachara
28/04/2022 09:42 pm