ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಜನ ಸಿಟ್ಟಿಗೆಳುತ್ತಿದ್ದಾರೆ ಹಾಗೆ ಮಾಡಬೇಡಿ, ನಾವೆಲ್ಲಾ ನಿಮ್ಮೊಂದಿಗಿದ್ದೇವೆ; ಗುರುದತ್ತ ಹೆಗಡೆ

ನವಲಗುಂದ: ನವಲಗುಂದ ತಾಲ್ಲೂಕಿನ ಹಲವೆಡೆ ಬೆಣ್ಣೆ ಹಳ್ಳದ ಪ್ರವಾಹಕ್ಕೆ ತುತ್ತಾಗಿ ಹಾನಿಯಾದ ಪ್ರದೇಶಗಳಿಗೆ ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಇಲ್ಲಿವರೆಗೆ 44 ಮನೆಗಳು ಬಿದ್ದಿವೆ. ನಿನ್ನೆ ಹಾಗೂ ಇವತ್ತು ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳದಲ್ಲಿ ಹೆಚ್ಚು ಮಳೆಯಾಗಿದೆ. ನೀರು ನುಗ್ಗುವ ಸ್ಥಳಗಳಲ್ಲಿ ಕಾಳಜಿ ಕೇಂದ್ರ ಆರಂಭ ಮಾಡುತ್ತಿದ್ದೇವೆ. ರಾತ್ರಿ ಒಟ್ಟ 8 ಕಡೆಗಳಲ್ಲಿ ಜನ ನೀರಿನಲ್ಲಿ ಸಿಲುಕಿದ್ರು. ಅವರನ್ನ ಅಗ್ನಿ ಶಾಮಕ ದಳ ರಕ್ಷಣೆ ಮಾಡಿದ್ದಾರೆ. ಈ ರೀತಿ ಘಟನೆಗಳು ನಡೆದಲ್ಲಿ ಕೆಲವೊಂದು ಕಡೆಗಳಲ್ಲಿ ಜನ ಸಿಟ್ಟಿಗೆಳುತ್ತಿದ್ದಾರೆ. ಹಾಗೆ ಮಾಡಬೇಡಿ, ನಾವೆಲ್ಲಾ ನಿಮ್ಮೊಂದಿಗಿದ್ದೇವೆ. ನಮಗೆ ಸಹಕರಿಸಿ ಎಂದರು.

Edited By : PublicNext Desk
Kshetra Samachara

Kshetra Samachara

08/09/2022 08:16 am

Cinque Terre

18.1 K

Cinque Terre

0

ಸಂಬಂಧಿತ ಸುದ್ದಿ