ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ತಾಲ್ಲೂಕಿನಲ್ಲಿ ಎರಡು ದಿನಗಳಲ್ಲಿ ಒಟ್ಟು 30 ಮನೆಗಳಿಗೆ ಹಾನಿ

ನವಲಗುಂದ : ಕಳೆದ ಎರಡು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಸಾಕಷ್ಟು ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮಂಗಳವಾರ 18 ಮನೆಗಳಿಗೆ ಹಾನಿಯಾಗಿದ್ದು, ಬುಧವಾರ 12 ಮನೆಗಳಿಗೆ ಹಾನಿಯಾಗಿವೆ ಎಂದು ತಹಶೀಲ್ದಾರ್ ಅನಿಲ ಬಡಿಗೇರ ಅವರಿಂದ ಮಾಹಿತಿ ದೊರಕಿದೆ.

ಇನ್ನು ದಿನಾಂಕ 17-5-2022 ಅಂದರೆ ಮಂಗಳವಾರ ಬ್ಯಾಲ್ಯಾಳ ಗ್ರಾಮದಲ್ಲಿ 4, ಬಳ್ಳೂರು-4, ಹಣಸಿ-5, ತಿರ್ಲಾಪುರ-3 ಹಾಗೂ ಗೊಬ್ಬರಗುಂಪಿ-2 ಮನೆ ಸೇರಿ ಒಟ್ಟು 18 ಮನೆಗಳು ಭಾಗಶಃ ಹಾನಿಗೊಳಗಾಗಿದ್ದವು.

ದಿನಾಂಕ 18-5-2022 ಅಂದರೆ ಬುಧವಾರ ಶಿರಕೋಳ ಗ್ರಾಮದಲ್ಲಿ 5, ಹೆಬ್ಬಾಳ-2, ಅಮರಗೋಳ-2, ಜಾವೂರ-1, ಬೆಳಹಾರ 2 ಸೇರಿ ಒಟ್ಟು 12 ಮನೆಗಳು ಹಾನಿಯಾಗಿವೆ ಎಂದು ಅಧಿಕೃತವಾಗಿ ತಾಲೂಕಾಡಳಿತದಿಂದ ಮಾಹಿತಿ ತಿಳಿದು ಬಂದಿದೆ.

ವರುಣನ ಆರ್ಭಟದಿಂದ ಗ್ರಾಮೀಣ ಪ್ರದೇಶದಲ್ಲಿನ ಜನರು ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಮನೆಗಳಿಗೆ ಆಗಿರುವ ಹಾನಿಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.

Edited By : PublicNext Desk
Kshetra Samachara

Kshetra Samachara

19/05/2022 02:28 pm

Cinque Terre

24.99 K

Cinque Terre

0

ಸಂಬಂಧಿತ ಸುದ್ದಿ