ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಶ್ರೀ ಯೋಗೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ

ನವಲಗುಂದ : ಶ್ರೀ ಯೋಗೇಶ್ವರ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭೇಟಿ ನೀಡಿ, ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳದ ಉಪಹಳ್ಳವಾದ ತುಪ್ಪರಿಹಳ್ಳದಲ್ಲಿ ಪ್ರತಿ ಮಳೆಗಾಲದಲ್ಲಿ 1.5 ಟಿಎಂಸಿ ನೀರು ಹರಿದು ಬೆಣ್ಣಿ ಹಳ್ಳವನ್ನು ಸೇರುತ್ತದೆ. ಈ ನೀರು ನೆರೆ ಹಾವಳಿಯನ್ನು ಉಂಟು ಮಾಡಿ, ಪ್ರತಿವರ್ಷವೂ ಜನತೆ ಸಂಕಷ್ಟಕ್ಕೊಳಗಾಗುವಂತೆ ಮಾಡುತ್ತದೆ.

ಆದರೆ ಪ್ರವಾಹ ತಂದೊಡ್ಡುವ ಈ ನೀರಿನ‌ ಸದುಪಯೋಗ ಮಾಡಿದರೆ ಹುಬ್ಬಳ್ಳಿ ಮತ್ತು ನವಲಗುಂದ ತಾಲೂಕಿನ ಮೊರಬ, ತಲೆಮೊರಬ, ತಿರ್ಲಾಪುರ, ಹಾಗೂ ಬ್ಯಾಹೆಟ್ಟಿ ಗ್ರಾಮಗಳ ಒಣ ಬೇಸಾಯ ರೈತರ ಜಮೀನುಗಳಿಗೆ ನೀರಾವರಿ ಒದಗಿಸಲಾಗುತ್ತದೆ. ಈ ನೀರಿನಿಂದ 10,000 ಹೆಕ್ಟೇರ್ ಕೃಷಿ ಜಮೀನಿಗೆ ನೀರಾವರಿ ವ್ಯವಸ್ಥೆ ಮಾಡಬಹುದು.

ಈ ನಿಟ್ಟಿನಲ್ಲಿ 'ಶ್ರೀ ಯೋಗೇಶ್ವರ ಯೇತ ನೀರಾವರಿ ಯೋಜನೆ' ಅತ್ಯಂತ ಮಹತ್ವಪೂರ್ಣವಾಗಿದ್ದು, ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತದೆ. ಇದರಿಂದ ನೆರೆ ಹಾವಳಿಯನ್ನೂ ತಡೆಗಟ್ಟಲು ಸಾಧ್ಯವಾಗುತ್ತದೆ. ಪ್ರಸ್ತುತ ಏತ ನೀರಾವರಿ ಯೋಜನೆಯು ಪ್ರವಾಹವನ್ನು ಪ್ರಯೋಜನಕರವಾಗಿ ಮಾರ್ಪಡಿಸುತ್ತದೆ.

ಈ ಸಂದರ್ಭದಲ್ಲಿ ಬ್ಯಾಹಟ್ಟಿ, ಸುಳ್ಳಾ, ತಿರ್ಲಾಪುರ, ಮೊರಬ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷರಾದ ಎಸ್ ಬಿ ದಾನಪ್ಪಗೌಡ್ರ ಮಾಜಿ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾದ ಅಡಿವೆಪ್ಪ ಮನವಿ ಹಾಗು ಎಬಿ ಹಿರೇಮಠ, ಗುರು ಹಿರಿಯರು, ಯುವಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/07/2022 08:28 am

Cinque Terre

13.46 K

Cinque Terre

0

ಸಂಬಂಧಿತ ಸುದ್ದಿ