ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮಹದಾಯಿ ಕಾರ್ಯಾರಂಭ ವಿಳಂಬ : ಹೋರಾಟದ ಎಚ್ಚರಿಕೆ ಕೊಟ್ಟ ರೈತರು

ನವಲಗುಂದ : ಮಹದಾಯಿ ಯೋಜನೆ ಕಾಲ ಸನ್ನಿಹಿತವಾಗಿದೆ ಎಂದು ಬೆಳಗಾವಿಯಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದು ಸ್ವಾಗತಾರ್ಹ, ಹೇಳಿದಂತೆ ಕಾರ್ಯಾರಂಭ ಕೂಡಲೇ ಆಗಬೇಕು. ವಿಳಂಬವಾದಲ್ಲಿ ಅನಿವಾರ್ಯವಾಗಿ ಉಗ್ರ ಹೋರಾಟ ಮಾಡಿ ನಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ರೈತರು ತಹಶೀಲ್ದಾರ್ ಮೂಲಕ ಮನವಿಯನ್ನು ಸಲ್ಲಿಸಿದರು.

ನವಲಗುಂದ ಪಟ್ಟಣದ ರೈತ ಭವನದ ಎದುರು ತಹಶೀಲ್ದಾರ್ ಮೂಲಕ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದ ರೈತರು, ಮಹದಾಯಿ ಯೋಜನೆ ಅನುಷ್ಠಾನಗೊಳ್ಳುವ ಕುರಿತು ಸಾಕಾರಗೊಳ್ಳುವ ಕಾಲ ಸನಿಹವಾಗಿದೆ ಎಂದು ನೀರಾವರಿ ಮಂತ್ರಿಗಳು ಬರವಸೆ ಕೊಟ್ಟಿದ್ದಾರೆ.

ಜುಲೈ ರಂದು ರೈತರು ಇದೇ ವಿಷಯವಾಗಿ ದೆಹಲಿಗೆ ಶಂಕರ ಪಾಟೀಲ ಮುನಿಯನಕೊಪ್ಪ ಅವರ ಸಹಯೋಗದೊಂದಿಗೆ ತೆರಳಿದಾಗ ಕರ್ನಾಟಕದ ಮಂತ್ರಿಗಳನ್ನು ಹಾಗೂ ಸಂಬಂಧಪಟ್ಟ ವಕೀಲರಾದ ಮೋಹನ ಕಾತರಕಿ ಇವರನ್ನು ಭೇಟಿಯಾಗಿ ಚರ್ಚಿಸಿದಾಗ ಮಂತ್ರಿ ನಿಯೋಗಕ್ಕೆ ಭರವಸೆ ನೀಡಿದ್ದರು.

ಮಹದಾಯಿ ವಿಳಂಬವಾಗದೆ ಕೂಡಲೇ ಕಾಮಗಾರಿ ಆರಂಭಿಸಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರಕ್ಕೆ ರೈತರು ಎಚ್ಚರಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸಿದ್ದಪ್ಪ ಮುಪ್ಪಯ್ಯನವರ, ರೈತ ಮುಖಂಡ ಸುಭಾಷಗೌಡ ಪಾಟೀಲ, ಮಲ್ಲೇಶ ಉಪ್ಪಾರ, ಮಾಬೂಸಾಬ್ ಯಾರಗುಪ್ಪಿ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/08/2022 04:54 pm

Cinque Terre

17.95 K

Cinque Terre

0

ಸಂಬಂಧಿತ ಸುದ್ದಿ