ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಟೀಂ ಇಂಡಿಯಾ ಎ ತಂಡ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
ಹೌದು. ನಿನ್ನೆಯಿಂದಲೇ ಆರಂಭವಾಗಬೇಕಿದ್ದ ಪಂದ್ಯವು ವರುಣನ ಕಾಟದಿಂದ ಇಂದು ಆರಂಭಗೊಂಡಿತ್ತು. ಆದರೆ ಇವತ್ತು ಕೂಡ ಪಂದ್ಯದ ವೇಳೆ ಮಳೆ ಬರುತ್ತಿರುವುದರಿಂದ ಆಟಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮಳೆ ಬರುವುದರಿಂದ ಮೈದಾನ ತೇವಾಂಶವಾಗಬಾರದೆಂದು ತಾಡಪತ್ರಿಯನ್ನು ಹೊದಿಸುತ್ತಿದ್ದಾರೆ. ಒಂದು ಸಾರಿ ಬಿಸಿಲು ಇನ್ನೊಂದು ಸಾರಿ ಮಳೆ ಬರುತ್ತಿದೆ. ಇದರಿಂದ ಪಂದ್ಯ ತಡವಾಗುತ್ತಿದೆ. ಸದ್ಯ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದು, 47 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿದೆ.
Kshetra Samachara
09/09/2022 03:50 pm