ಕುಂದಗೋಳ : ಎಲ್ಲ ಮಕ್ಕಳಲ್ಲೂ ಗೆಲ್ಲುವ ಉತ್ಸಾಹ ಎಲ್ಲ ಶಿಕ್ಷಕರಲ್ಲೂ ಮಕ್ಕಳನ್ನು ಹುರಿದುಂಬಿಸುವ ಪ್ರೋತ್ಸಾಹ ಒಬ್ಬರಿಗಿಂತ ಒಬ್ಬರ ಜಾಣ್ಮೆಯ ಕ್ರೀಡಾಕೂಟಕ್ಕೆ ಕುಂದಗೋಳ ಪಟ್ಟಣದ ಜೆ.ಎಸ್.ಎಸ್ ಆವರಣ ಸಾಕ್ಷಿಯಾಯಿತು.
ಹೌದು ! ಕುಂದಗೋಳ ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕ್ಲಸ್ಟರ್ ಮಟ್ಟದ ಕ್ರೀಡಾ ಚಟುವಟಿಕೆಗಳಿಗೆ ಜೆ.ಎಸ್
ಎಸ್ ಆವರಣ ವೇದಿಕೆಯಾಗಿತ್ತು, ಕ್ರೀಡಾ ಧ್ವಜ ಹಾರಿಸುವ ಮೂಲಕ ಆರಂಭವಾದ ಕ್ರೀಡೆಗಳಲ್ಲಿ ಕುಂದಗೋಳ ತಾಲೂಕಿನ ಎಲ್ಲ ಶಾಲೆಯ ಮಕ್ಕಳು ಅತಿ ಉತ್ಸಾಹದಿಂದ ಪಾಲ್ಗೊಂಡರು.
ಖೋಖೋ, ಕಬಡ್ಡಿ, ವ್ಹಾಲಿಬಾಲ್, ಥ್ರೋ ಬಾಲ್, ಸೇರಿದಂತೆ ರಿಲೇ, ವ್ಯಯಕ್ತಿಕ ಆಟಗಳಾದ ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತ, ಬಲ್ಲೇ ಎಸೆತ, ಓಟ ಸೇರಿದಂತೆ ಹಲವಾರು ಆಟಗಳು ಜೆ.ಎಸ್.ಎಸ್ ಆವರಣದಲ್ಲಿ ಅತಿ ಅದ್ದೂರಿಯಾಗಿ ನೆರವೇರಿದವು.ಕ್ಲಸ್ಟರ್ ಮಟ್ಟದಲ್ಲಿ ವಿಜೇತರಾದ ಮಕ್ಕಳು ವಲಯ, ತಾಲೂಕು ಜಿಲ್ಲಾ ರಾಜ್ಯಮಟ್ಟದ ಆಟಗಳು ಹಂತ ಹಂತವಾಗಿ ನಡೆಯಲಿವೆ.
Kshetra Samachara
28/07/2022 03:59 pm