ಅಣ್ಣಿಗೇರಿ: ಚೆನ್ನೈ ಮತ್ತು ತಮಿಳುನಾಡಿನಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ಪರವಾಗಿ ಪ್ರತಿನಿಧಿಸಿದ ಪಟ್ಟಣದ ಗೋಲ್ಡನ್ ಕರಾಟೆ ಕ್ಲಬ್ ಸಂಸ್ಥೆಯ ಕ್ರೀಡಾ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿ ರಾಜ್ಯಕ್ಕೆ ಹೆಸರು ತಂದಿದ್ದಾರೆ.
ಕುಮಾರ್ ಕಾರ್ತಿಕ್ ನಾಯ್ಕರ್ ಪ್ರಥಮ ಸ್ಥಾನ, ಪಡೆದರೆ ಕುಮಾರ ಮುಜಾಹಿದ್ ಹೊರಗಿನಮನೆ, ಕುಮಾರ್ ಮೋಹಿದ್ ರಾ ನಾಯ್ಕರ್ ಹಾಗೂ ಕುಮಾರಿ ಕಾವೇರಿ ನಾಯ್ಕರ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಕುಮಾರ್ ಸಾಗರ್ ಕೊಂಡಗೂಳಿ, ಕುಮಾರ್ ಅಜಯ್ ಹಣಸಿ, ಕುಮಾರ್ ಮನೋಜ್ ಜಗಲಿ, ಹಾಗೂ ಕುಮಾರ್ ಗುರುಪಾದೇಶ್ ಎಸ್ ಹುಬ್ಬಳ್ಳಿ ತೃತೀಯ ಸ್ಥಾನ ಗಳಿಸುವ ಮೂಲಕ ರಾಜ್ಯ ಹಾಗೂ ಜಿಲ್ಲೆ ಸೇರಿದಂತೆ ನಮ್ಮ ತಾಲೂಕಿಗೆ ನಮ್ಮ ತಾಲೂಕಿಗೆ ಕೀರ್ತಿಯನ್ನು ತಂದಿರುತ್ತಾರೆ.
ಇನ್ನೂ ಉತ್ತಮ ಪ್ರದರ್ಶನ ನೀಡಿ ಆಟದಲ್ಲಿ ಭಾಗವಹಿಸಿದ ಕುಮಾರಿ ವೇದ ಆಕಳವಾಡಿ, ಕುಮಾರಿ ಸಂಸ್ಕೃತಿ ಶೆಟ್ಟಿ, ಕುಮಾರ್ ಭೀಮಸೇನ್ ಶಾಸ್ತ್ರಿ ಗೊಲ್ಲರ್, ಸ್ಕಂದಾ ಶೆಟ್ಟಿ ಹಾಗೂ ಶ್ರೀ ಮಂದರ್ ಹನುಮಕ್ಕನವರ್ ಅವರು ಸಹ ಆಟದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಇವರಿಗೆ ತರಬೇತಿಯನ್ನು ನೀಡಿದ ಕ್ಲಬ್‌ನ ತರಬೇತುದಾರರಾದ ಸೆನ್ಸಾಯ್ ಗಣೇಶ್ ಇಳಕಲ್ ಹಾಗೂ ಸಂಸ್ಥೆಯ ಅಧ್ಯಕ್ಷ ಸಿ.ಜಿ ನಾವಳ್ಳಿ, ಉಪಾಧ್ಯಕ್ಷ ಪ್ರೇಮನಾಥ್ ಸಾ ಬಾಕಳೆ, ಗೌರವಾಧ್ಯಕ್ಷ ಲಕ್ಷ್ಮಣ್ ನಾಯ್ಕರ್ ಹಾಗೂ ಪಟ್ಟಣದ ಸಾರ್ವಜನಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Kshetra Samachara
08/07/2022 02:44 pm