ಹುಬ್ಬಳ್ಳಿ: ಶೂಟಿಂಗ್ ಸ್ಪರ್ಧೆ ಅಂದರೆ ನಿಜಕ್ಕೂ ಅದು ಏಕಾಗ್ರತೆ, ನೇರ, ದಿಟ್ಟ ಗುರಿಯಿಂದಲೇ ಆರಂಭಗೊಳ್ಳುವ ಸ್ಪರ್ಧೆ. ಇಂತಹ ಮಹತ್ವದ ಶೂಟಿಂಗ್ ಸ್ಪರ್ಧೆಯನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದ್ದು, ಕ್ರೀಡಾ ಪಟುಗಳು ಉತ್ಸುಕತೆಯಿಂದ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶನ ಮಾಡಿದರು.
ಆರ್.ಕೆ. ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಮೇ 30 ರಿಂದ ಜೂನ್ 05 ರವರೆಗೆ ನಡೆದ ಅಖಿಲ ಭಾರತ ಮಟ್ಟದ ಎರಡನೇ ಹುಬ್ಬಳ್ಳಿ ಮುಕ್ತ ಶೂಟಿಂಗ್ ಚಾಂಪಿಯನ್ ಶಿಪ್ ಕರ್ನಾಟಕ-2022 ಯಶಸ್ವಿಯಾಗಿ ನೆರವೇರಿತು. ಈ ಸ್ಪರ್ಧೆಯಲ್ಲಿ ದೇಶದ ಹಲವಾರು ರಾಜ್ಯಗಳಿಂದ ಬಂದಿದ್ದ ಕ್ರೀಡಾಪಟುಗಳನ್ನು ಸೇರಿ ಒಟ್ಟು 430 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.
ಏರ್ ರೈಫಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದವರಿಗೆ 1,00,000 ರೂ, ಬೆಳ್ಳಿಪದಕ ಪಡೆದವರಿಗೆ 50,000 ರೂ, ಕಂಚಿನ ಪದಕ ಪಡೆದವರಿಗೆ 25000 ರೂ, ಬಹುಮಾನ ವಿತರಿಸಲಾಯಿತು. ಅದೇ ರೀತಿ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಪಡೆದವರಿಗೆ 1,00,000 ರೂ.ಬೆಳ್ಳಿಪದಕ ಪಡೆದವರಿಗೆ 50,000 ರೂ.ಕಂಚಿನ ಪದಕ ಪಡೆದವರಿಗೆ 25,000 ರೂ. ಬಹುಮಾನ ವಿತರಿಸಲಾಯಿತು. ಬೇರೆ ಬೇರೆ ವಿಭಾಗಗಳಲ್ಲಿ ಒಟ್ಟು 6,70,000 ನಗದು ಬಹುಮಾನ ವಿತರಿಸಲಾಯಿತು.
ಇನ್ನೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಸ್ವರ್ಣ ಗ್ರೂಪ್ ಆಫ್ ಕಂಪನಿಯ ಮಾಲೀಕರು ಹಾಗೂ ಸಮಾಜ ಸೇವಕರಾದ ಡಾ. ವಿ.ಎಸ್.ವಿ.ಪ್ರಸಾದ್, ರಮೇಶ್ ಕಾಂಬಳೆ, ರವೀಂದ್ರ ಕಲ್ಯಾಣಿ, ಕಿರಣ್ ಪವಾರ್,ರವಿಚಂದ್ರ ಬಾಲೆಹೊಸೂರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಉದ್ಯಮಿಗಳಾದ ಡಾ.ವಿ.ಎಸ್.ವಿ ಪ್ರಸಾದ ಅವರಿಗೆ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಎಲ್ಲಾ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೆಸ್ಟ್ ಶೂಟ್ ಶೂಟಿಂಗ್ ಅಕಾಡೆಮಿಯ ದಿವ್ಯಾ ಟಿ.ಎಸ್. ಬಂಗಾದ ಪದಕ ಪಡೆದರು. ರೈಫಲ್ ಶೂಟಿಂಗ್‌ನಲ್ಲಿ ಸೇನೆಯ ರಾಮಪಾಲ ಬೆಳ್ಳಿ, ಇಎಸ್‌ಎಚ್‌ನ ಪ್ರದೀಪ್ ಕುಮಾರ ಕಂಚಿನ ಪದಕ ಗೆದ್ದರು.
ಒಟ್ಟಿನಲ್ಲಿ ಆರ್.ಕೆ. ಟೈಗರ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶೂಟಿಂಗ್ ಸ್ಪರ್ಧೆಯಲ್ಲಿ ನಿಜಕ್ಕೂ ಕ್ರೀಡಾಪಟುಗಳು ಸಾಕಷ್ಟು ಮನರಂಜನೆ ನೀಡಿದ್ದು, ಮಾತ್ರವಲ್ಲದೆ ತಮ್ಮ ಶೂಟಿಂಗ್ ಪ್ರತಿಭೆಯ ಅನಾವರಣ ಮಾಡಿದರು.
Kshetra Samachara
07/06/2022 06:40 pm